Yashasvi Jaiswal: ಇತಿಹಾಸ ಸೃಷ್ಟಿಸಿದ ಯಶಸ್ವಿ ಜೈಸ್ವಾಲ್; ವಲ್ಡ್ ರೆಕಾರ್ಡ್ ಸರಿಗಟ್ಟಿದ ಮೊದಲ ಭಾರತೀಯ/ Yashasvi Jaiswal equals Graeme Smiths record for most centuries as an opening batsman | ಕ್ರೀಡೆ

Yashasvi Jaiswal: ಇತಿಹಾಸ ಸೃಷ್ಟಿಸಿದ ಯಶಸ್ವಿ ಜೈಸ್ವಾಲ್; ವಲ್ಡ್ ರೆಕಾರ್ಡ್ ಸರಿಗಟ್ಟಿದ ಮೊದಲ ಭಾರತೀಯ/ Yashasvi Jaiswal equals Graeme Smiths record for most centuries as an opening batsman | ಕ್ರೀಡೆ

Last Updated:

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅದ್ಭುತ ಶತಕ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

Yashasvi JaiswalYashasvi Jaiswal
Yashasvi Jaiswal

ದೆಹಲಿಯ ಅರುಣ್ ಜೇಟ್ಲಿ (Arun Jaitley) ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ (West Indies vs India) ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಶುಭಮನ್ ಗಿಲ್ (Shubman Gill) ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕ ನಿರೀಕ್ಷೆಗೆ ತಕ್ಕಂತೆ ಬ್ಯಾಟರ್ಸ್​ನಿಂದ ಟೀಮ್ ಇಂಡಿಯಾ (Team India)ಕ್ಕೆ ಅದ್ಭುತ ಆರಂಭ ಸಿಕ್ಕಿದೆ. ಪಂದ್ಯದ ಮೊದಲ ದಿನದಂದು ಭಾರತ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅಬ್ಬರಿಸಿದರು. ಜೈಸ್ವಾಲ್ 253 ಎಸೆತಗಳಲ್ಲಿ 22 ಬೌಂಡರಿಗಳ ನೆರವಿನಿಂದ s173 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಇನ್ನಿಂಗ್ಸ್‌ ಮೂಲಕ ಯಶಸ್ವಿ ಹಲವಾರು ದಾಖಲೆಗಳನ್ನು ಸೃಷ್ಟಿಸಿದರು.

ಯಶಸ್ವಿ ಜೈಸ್ವಾಲ್ ಈ ಬಾರಿಯೂ ಶತಕ ಬಾರಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಶತಕದೊಂದಿಗೆ ಜೈಸ್ವಾಲ್ ವಿಶ್ವ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಜೈಸ್ವಾಲ್ 24 ವರ್ಷ ತುಂಬುವ ಮೊದಲು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ವಲ್ಡ್ ರೆಕಾರ್ಡ್ ಸರಿಗಟ್ಟಿದ ಜೈಸ್ವಾಲ್

ಯಶಸ್ವಿ ಜೈಸ್ವಾಲ್ ಗ್ರೇಮ್ ಸ್ಮಿತ್ ಆರಂಭಿಕ ಬ್ಯಾಟರ್ ಆಗಿ ಮಾಡಿದ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಜೈಸ್ವಾಲ್ ಈಗ ಈ ಸಾಧನೆ ಮಾಡಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ. ಕೇವಲ 23 ವರ್ಷ ವಯಸ್ಸಿನ ಯಶಸ್ವಿ ಜೈಸ್ವಾಲ್ ತಮ್ಮ 7ನೇ ಟೆಸ್ಟ್ ಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಈ ಎಲ್ಲಾ ಶತಕಗಳನ್ನು ಆರಂಭಿಕರಾಗಿ ಬಾರಿಸಿದ್ದಾರೆ. 24 ವರ್ಷ ವಯಸ್ಸಾಗುವ ಮೊದಲು ಜೈಸ್ವಾಲ್ ಜಂಟಿಯಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆರಂಭಿಕ ಬ್ಯಾಟರ್ ಆಗಿದ್ದಾರೆ. 24 ವರ್ಷ ವಯಸ್ಸಾಗುವ ಮೊದಲು ದಕ್ಷಿಣ ಆಫ್ರಿಕಾ ಪರ 7 ಶತಕಗಳನ್ನು ಗಳಿಸಿದ ಗ್ರೇಮ್ ಸ್ಮಿತ್ ಅವರೊಂದಿಗೆ ಜೈಸ್ವಾಲ್ ವಿಶ್ವ ದಾಖಲೆಯನ್ನು ಹಂಚಿಕೊಂಡಿದ್ದಾರೆ.

24 ವರ್ಷಕ್ಕೂ ಮುನ್ನ ಅತಿ ಹೆಚ್ಚು ಶತಕ ಗಳಿಸಿದ ಆರಂಭಿಕರು

ಯಶಸ್ವಿ ಜೈಸ್ವಾಲ್ (ಭಾರತ)- 7 ಶತಕಗಳು

ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ)- 7 ಶತಕಗಳು

ಕ್ರೇಗ್ ಬ್ರಾಥ್‌ವೈಟ್ (ವೆಸ್ಟ್ ಇಂಡೀಸ್)- 5 ಶತಕಗಳು

ಅಲಾಸ್ಟೇರ್ ಕುಕ್ (ಇಂಗ್ಲೆಂಡ್)- 5 ಶತಕಗಳು

ಲೆನ್ ಹಟ್ಟನ್ (ಇಂಗ್ಲೆಂಡ್)- 5 ಶತಕಗಳು

ಸಚಿನ್, ರೋಹಿತ್ ಹಾದಿಯಲ್ಲಿ ಜೈಸ್ವಾಲ್

ಜೈಸ್ವಾಲ್ 24 ವರ್ಷ ತುಂಬುವ ಮೊದಲು ಏಳು ಶತಕಗಳನ್ನು ಬಾರಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ. ಒಟ್ಟಾರೆಯಾಗಿ ಅವರು ಈ ಸಾಧನೆ ಮಾಡಿದ ಎರಡನೇ ಭಾರತೀಯ. ಸಚಿನ್ ತೆಂಡೂಲ್ಕರ್ 24 ವರ್ಷ ತುಂಬುವ ಮೊದಲು 11 ಶತಕಗಳನ್ನು ಗಳಿಸಿದ್ದಾರೆ. ರೋಹಿತ್ ಶರ್ಮಾ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 7 ಶತಕಗಳನ್ನು ಗಳಿಸಿದ ಎರಡನೇ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ರೋಹಿತ್ ಶರ್ಮಾ ಡಬ್ಲ್ಯೂಟಿಸಿ ಇತಿಹಾಸದಲ್ಲಿ 9 ಶತಕಗಳನ್ನು ಗಳಿಸಿದ್ದಾರೆ. ಪ್ರಸ್ತುತ 7 ಟೆಸ್ಟ್ ಶತಕಗಳನ್ನು ಬಾರಿಸಿದ ಮೊದಲ ಭಾರತೀಯ ಆರಂಭಿಕ ಬ್ಯಾಟರ್ ಎಂಭ ಅನ್ನು ಜೈಸ್ವಾಲ್ ಮಾಡಿದ್ದಾರೆ. 2020-2025 ರ ಅವಧಿಯಲ್ಲಿ ರೋಹಿತ್ 6 ಶತಕಗಳನ್ನು ಬಾರಿಸಿದ್ದರು.