Last Updated:
ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೀಪಾವಳಿ ಪ್ರಯುಕ್ತ ಯಶಸ್ವಿ ಆನೆಗೆ ಗಜಲಕ್ಷ್ಮಿ ಪೂಜೆ ನಡೆಯಿತು. ಆನಂದ್ ಸಿಂಗ್ 2005ರಲ್ಲಿ ಯಶಸ್ವಿ ಹೆಸರಿನ ಆನೆಯನ್ನು ದಾನವಾಗಿ ನೀಡಿದ್ದರು.
ಮಂಗಳೂರು: ತುಳುನಾಡಿನಲ್ಲಿ ದೀಪಾವಳಿ (Deepavali) ಹಬ್ಬದ ಸಂಭ್ರಮ ಮೇಳೈಸಿದೆ. ಕೃಷಿಕರು ತಮ್ಮ ಕೃಷಿ ಚಟುವಟಿಕೆಗೆ ಬಳಸುವ ಆಯುಧಗಳಿಗೆ (Weapon) ಮತ್ತು ಜಾನುವಾರುಗಳಿಗೆ (Cattle) ಪೂಜೆ ಸಲ್ಲಿಸಲಾಗಿದೆ. ದಕ್ಷಿಣ ಭಾರತದ (India) ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ದೀಪಾವಳಿ ಹಬ್ಬದ ಪ್ರಯುಕ್ತ ಗಜಲಕ್ಷ್ಮಿ ಪೂಜೆ ಸಲ್ಲಿಸಲಾಗಿದೆ.
ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ದೇವಳದ ಗಜರಾಣಿ ಯಶಸ್ವಿಗೆ ಗೋಪೂಜೆ ಪ್ರಯುಕ್ತ ಗಜಲಕ್ಷ್ಮಿ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದ ಅರ್ಚಕರು ಯಶಸ್ವಿಗೆ ಹಣ್ಣು-ಹಂಪಲು, ತೆಂಗಿನಕಾಯಿ, ಅವಲಕ್ಕಿ, ಹೊದ್ಲು, ಬೆಲ್ಲ, ಇತ್ಯಾದಿ ತಿನಿಸುಗಳನ್ನು ನೀಡಿದರು. ಬಳಿಕ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಪೂಜಾ ಕಾರ್ಯಕ್ರಮದ ಬಳಿಕ ಗಜರಾಣಿಗೆ ಮಂಗಳಾರತಿ ಬೆಳಗಲಾಗಿದೆ.
ದೀಪಾವಳಿ ಮತ್ತು ನವರಾತ್ರಿಯ ವಿಶೇಷ ದಿನ ಸೇರಿದಂತೆ ವರ್ಷಕ್ಕೆ ಎರಡು ಬಾರಿ ದೇವಳದಲ್ಲಿ ಗಜಪೂಜೆ ನಡೆಯುತ್ತದೆ. ಲಕ್ಷ್ಮಿ ಪೂಜೆ ಬಳಿಕ ಗಜಪೂಜೆ ನಡೆಯುತ್ತದೆ. ಹೆಸರಾಂತ ನಾಗಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಆನೆ ಯಶಸ್ವಿ ಕ್ಷೇತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತನೂ ಯಶಸ್ವಿಯನ್ನು ನೋಡದೆ, ಆಕೆಯ ಸೊಂಡಿಲಿನಿಂದ ಆಶೀರ್ವಾದ ಪಡೆಯದೆ ಕ್ಷೇತ್ರದಿಂದ ಹಿಂದಿರುಗಿರೋದು ಕಡಿಮೆ.
ಕ್ಷೇತ್ರದ ಪ್ರತಿಯೊಂದು ಧಾರ್ಮಿಕ ಆಚರಣೆಯಲ್ಲಿ ಯಶಸ್ವಿಯ ಹಾಜರು ಇದ್ದೇ ಇರುತ್ತದೆ. ಅದರಲ್ಲೂ ಕ್ಷೇತ್ರದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವ ಮತ್ತು ಚಂಪಾಷಷ್ಠಿಯ ಹತ್ತು ದಿನಗಳೂ ಯಶಸ್ವಿ ದೇವರ ಜೊತೆಗೇ ಇರುತ್ತೆ. ದೇವರ ಬಲಿಪೂಜೆ, ರಥೋತ್ಸವ, ಅವಭೃತ ಸ್ನಾನ ಹೀಗೆ ಎಲ್ಲಾ ಧಾರ್ಮಿಕ ವಿಧಿ-ವಿಧಾನದಲ್ಲೂ ಯಶಸ್ವಿ ಆನೆ ಪಾಲ್ಗೊಳ್ಳುತ್ತದೆ.
ಆನೆಯನ್ನು ದಾನ ಮಾಡಿದವರು ಯಾರು? ಅಸ್ಸಾಂನ ಆನೆಗೆ ಕರ್ನಾಟಕದ ಪ್ರೀತಿ
Dakshina Kannada,Karnataka
October 23, 2025 4:52 PM IST