Last Updated:
ಈ ಬಾರಿ ತಂಡದ ಮುಖ್ಯಸ್ಥ ಅಮಿತ್ ರಾಜ್ ಅವರ ಮುತುವರ್ಜಿಯಿಂದ ಹುಲಿವೇಷದ ಕರೆಯೋಲೆಗಾಗಿ ವಿಶಿಷ್ಟ ಆಮಂತ್ರಣ ಪತ್ರಿಕೆ ಸಿದ್ದವಾಗಿದೆ. ಇದನ್ನು ತೆರೆದರೆ ಸಾಕು ಒಂದು ನಿಮಿಷಗಳ ಕಾಲ ಹುಲಿವೇಷದ ತಾಸೆ, ಟ್ರಂಪೆಟ್, ಡೋಲಿನ ನಿನಾದ ಕೇಳುತ್ತದೆ.
ಮಂಗಳೂರು: ವೇದಿಕೆಯೇರಿ ಸ್ಪರ್ಧೆಗೆ ಹೆಜ್ಜೆ ಹಾಕು ಹುಲಿವೇಷ ತಂಡಗಳು ಪ್ರತೀ ವರ್ಷವೂ ಹೊಸತನವನ್ನು ಬಯಸುವುದು ಸಹಜ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್ (Yemmekere Friends Circle) ತಂಡವು ತಮ್ಮ ಆಮಂತ್ರಣ ಪತ್ರಿಕೆಯಲ್ಲಿಯೇ ವಿಭಿನ್ನತೆಯನ್ನು ತಂದಿದ್ದು, ಏನಿದರ ವಿಶೇಷ ಎಂಬುದಕ್ಕೆ ಈ ಸುದ್ದಿ ನೋಡಿ.
ಹೌದು, ಹುಲಿವೇಷ ಇಳಿಸುವುದರಲ್ಲಿ 35 ವರ್ಷಗಳನ್ನು ಕಂಡಿರುವ ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್ ತಂಡ ಭಾರೀ ಹೆಸರು ಮಾಡಿದ ತಂಡ. ಸದ್ಯ ತಂಡದಲ್ಲಿ ಉತ್ಸಾಹಿ ಯುವಕರುಗಳಿದ್ದು, ಸದಾ ವಿಭಿನ್ನ ಪ್ರಯೋಗಶೀಲತೆ ಮಾಡುತ್ತಿರುತ್ತಾರೆ. ಇದಕ್ಕಾಗಿಯೇ ಐದಾರು ತಿಂಗಳುಗಳಿಂದ ಶ್ರಮವಹಿಸುತ್ತಿರುತ್ತಾರೆ. ಈ ಬಾರಿ ತಂಡದ ಮುಖ್ಯಸ್ಥ ಅಮಿತ್ ರಾಜ್ ಅವರ ಮುತುವರ್ಜಿಯಿಂದ ಹುಲಿವೇಷದ ಕರೆಯೋಲೆಗಾಗಿ ವಿಶಿಷ್ಟ ಆಮಂತ್ರಣ ಪತ್ರಿಕೆ ಸಿದ್ದವಾಗಿದೆ. ಇದನ್ನು ತೆರೆದರೆ ಸಾಕು ಒಂದು ನಿಮಿಷಗಳ ಕಾಲ ಹುಲಿವೇಷದ ತಾಸೆ, ಟ್ರಂಪೆಟ್, ಡೋಲಿನ ನಿನಾದ ಕೇಳುತ್ತದೆ.
ತಾಸೆ-ಟ್ರಂಪೆಟ್-ಡೋಲಿನ ಮುದ್ರಿತ ದನಿ ರೆಕಾರ್ಡ್
ಹಿಂದೆ ಒಂದು ಸಲ ಕಂಡ ಬರ್ತ್ಡೇ ಗ್ರೀಟಿಂಗ್ ಮಾದರಿಯ ವಿಭಿನ್ನ ಆಮಂತ್ರಣ ಪತ್ರಿಕೆಯನ್ನು ಈ ಬಾರಿ ಮಾಡಬೇಕೆಂಬ ಚಿಂತನೆಯಿತ್ತು. ಆದರೆ ಅದಕ್ಕೆ ಬೇಕಾದ ಚಿಪ್‌ಗೆ ಹುಡುಕಾಟ ಅಷ್ಟೊಂದು ತ್ರಾಸದಾಯವಾಗಿತ್ತು. ಹುಡುಕಿ ಹುಡುಕಿ ಕೊನೆಗೆ ಮುಂಬೈಯಲ್ಲಿ ಈ ಚಿಪ್ ಸಿಕ್ಕಿದೆ. ಈ ಚಿಪ್‌ನೊಳಗಡೆ ಎಮ್ಮೆಕೆರೆ ತಂಡದ ತಾಸೆ-ಟ್ರಂಪೆಟ್-ಡೋಲಿನ ಮುದ್ರಿತ ದನಿಯನ್ನು ರೆಕಾರ್ಡ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಆಮಂತ್ರಣ ಮುದ್ರಣದ ವೇಳೆ ಮುದ್ರಿತ ಚಿಪ್ ಅನ್ನು ಅದರೊಳಗಡೆ ಅಡಕಗೊಳಿಸಲಾಗಿದೆ. ಸಾಕಷ್ಟು ದೊಡ್ಡದೂ, ಆಕರ್ಷಕವಾಗಿಯೂ ಇರುವ ಈ ಆಮಂತ್ರಣ ಪತ್ರಿಕೆ ತಯಾರಿಗೆ ತಗುಲಿದ ಖರ್ಚು 600 ರೂ. ಆಗಿದೆ.
ಇದನ್ನೂ ಓದಿ: Dasara Dolls: ಮಲೆನಾಡಿನಲ್ಲಿ ಮೈಸೂರಿನ ಗೊಂಬೆ! ಚಿಕ್ಕಮಗಳೂರಿನ ಈ ಪುರೋಹಿತರ ಮನೆಯ ದಸರಾ ಗೊಂಬೆಗಳ ವಿಶೇಷವೇ ಬೇರೆ!
ಒಟ್ಟು ನೂರು ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗಿದ್ದು, ಬಹಳಷ್ಟು ಮಂದಿ ಇದರ ವಿಶಿಷ್ಟ ಮಾದರಿಗೆ ಮನಸೋತಿದ್ದು ಇದೆಯಂತೆ. ಇನ್ನಷ್ಟು ಮಂದಿ ವಿಐಪಿಗಳಿಗೆ ಈ ಆಮಂತ್ರಣ ಪತ್ರಿಕೆಗಳು ಕೊಡಬೇಕಿದ್ದು, ಆದರೆ ತಮ್ಮಲ್ಲಿಯೂ ಖಾಲಿಯಾಗಿದೆ ಎಂದು ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್ ತಂಡದ ಅಮಿತ್ ರಾಜ್ ಹೇಳಿದ್ದಾರೆ.
Mangalore,Dakshina Kannada,Karnataka
October 11, 2024 6:15 PM IST