ಚಲನಚಿತ್ರ ಪ್ರಶಸ್ತಿ ಘೋಷಣೆ; ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ, ‘ಪಿಂಕಿ ಎಲ್ಲಿ’ ಅತ್ಯುತ್ತಮ ಚಿತ್ರ – FILM AWARDS AANNOUNCED

ಚಲನಚಿತ್ರ ಪ್ರಶಸ್ತಿ ಘೋಷಣೆ; ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ, ‘ಪಿಂಕಿ ಎಲ್ಲಿ’ ಅತ್ಯುತ್ತಮ ಚಿತ್ರ – FILM AWARDS AANNOUNCED

2020ನೇ ಸಾಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಅತ್ಯುತ್ತಮ ನಟ ಪ್ರಜ್ವಲ್ ದೇವರಾಜ್, ಅತ್ಯುತ್ತಮ ನಟಿ ಅಕ್ಷತಾ ಪಾಂಡವಪುರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

google photos

 

ಬೆಂಗಳೂರು: ರಾಜ್ಯ ಸರ್ಕಾರವು ಕೊಡಮಾಡುವ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಘೋಷಣೆ ಮಾಡಲಾಗಿದೆ. 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಇವುಗಳಾಗಿವೆ. ‘ಜಂಟಲ್ ಮ್ಯಾನ್’ ಚಿತ್ರದ ಅಮೋಘ ಅಭಿನಯಕ್ಕಾಗಿ ನಟ ‘ಪ್ರಜ್ವಲ್ ದೇವರಾಜ್’ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ‘ಪಿಂಕಿ ಎಲ್ಲಿ’ ಚಿತ್ರದಲ್ಲಿನ ಅಭಿನಯಕ್ಕೆ ‘ಅಕ್ಷತಾ ಪಾಂಡವಪುರ’ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನ ನೀಡಲಾಗಿದೆ.

‘ಪಿಂಕಿ ಎಲ್ಲಿ’ ಚಿತ್ರವು 2020ನೇ ಸಾಲಿನ ಮೊದಲ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಪ್ರಥ್ವಿ ಕೊಣನೂರು ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಸಪ್ತಗಿರಿ ಕ್ರಿಯೇಶನ್ಸ್​ನ ಕೃಷ್ಣೇಗೌಡ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಎರಡನೇ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯು ‘ವರ್ಣಪಟಲ’ ಚಿತ್ರಕ್ಕೆ ಹಾಗೂ ತೃತೀಯ ಅತ್ಯುತ್ತಮ ಪ್ರಶಸ್ತಿಯು ‘ಹರಿವ ನದಿಗೆ ಮೈಯೆಲ್ಲಾ ಕಾಲು’ ಸಿನಿಮಾಕ್ಕೆ ದೊರೆತಿದೆ.

ಗಿಳಿಯು ಪಂಜರದೊಳಿಲ್ಲ’ ಮತ್ತು ‘ಈ ಮಣ್ಣು’ ಚಲನಚಿತ್ರಗಳು ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ ಪ್ರಶಸ್ತಿಗೆ ಭಾಜನವಾಗಿವೆ. ಸಂಗಮೇಶ ಸಜ್ಜನರ್ ಅವರ ನಿರ್ದೇಶನದ ‘ಫೋರ್ ವಾಲ್ಸ್’ ಅತ್ಯುತ್ತಮ ಮನರಂಜನೆಯ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಆದಿತ್ಯ ಆರ್ ಚಿರಂಜೀವಿ ನಿರ್ದೇಶನದ ‘ಪದಕ’ ಅತ್ಯುತ್ತಮ ಮಕ್ಕಳ ಚಿತ್ರಕ್ಕೆ ಪುರಸ್ಕಾರ ದೊರೆತಿದೆ.

ನಿರ್ದೇಶಕ ಬಿ ಎಸ್ ಲಿಂಗದೇವರು ಅವರ ನೇತೃತ್ವದ ಆಯ್ಕೆ ಸಮಿತಿಯ ಶಿಫಾರಸ್ಸಿನಂತೆ 2020ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಆಯ್ಕೆ ಸಮಿತಿಯು ಒಟ್ಟು ಪ್ರಶ್ತಿಗಾಗಿ ಸಲ್ಲಿಕೆಯಾಗಿದ್ದ 66 ಚಲನಚಿತ್ರಗಳನ್ನು ವೀಕ್ಷಿಸಿ ಪ್ರಶಸ್ತಿಗೆ ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.

ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ತಲಾ ಒಂದು ಲಕ್ಷ ರೂ. ನಗದು ಹಾಗೂ 50ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾಗಳು, ನಟ, ನಟಿಯರು ಸೇರಿದಂತೆ ಸಿನಿ ಕಲಾವಿದರ ಪ್ರಶ್ತಿ ಪಟ್ಟಿ ಈ ರೀತಿ ಇದೆ

.

 

 

google.com

Leave a Reply

Your email address will not be published. Required fields are marked *