ದೇಶಿ ಮಾರುಕಟ್ಟೆಗೆ ಬರ್ತಿದೆ ವಿವೋ ನ್ಯೂ ಮಾಡೆಲ್​! ಬೆಲೆ ಅಗ್ಗ, ಕುಗ್ಗದ ಫೀಚರ್ಸ್ – VIVO T4X 5G

 

ದೇಶಿ ಮಾರುಕಟ್ಟೆಗೆ ಬರ್ತಿದೆ ವಿವೋ ನ್ಯೂ ಮಾಡೆಲ್​! ಬೆಲೆ ಅಗ್ಗ, ಕುಗ್ಗದ ಫೀಚರ್ಸ್ – VIVO T4X 5G

Vivo T4x 5G: ದೇಶಿಯ ಮಾರುಕಟ್ಟೆಗೆ ವಿವೋ ತನ್ನ ಹೊಸ ಮಾಡೆಲ್​ ಪರಿಚಯಿಸಲು ತಯಾರಿ ನಡೆಸುತ್ತಿದೆ.

Vivo T4x 5G: ಸ್ವದೇಶಿ ಮಾರುಕಟ್ಟೆಗೆ ವಿವೋ ತನ್ನ ಟಿ4ಎಕ್ಸ್ 5ಜಿ ಎಂಬ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ವಿಚಾರ ಕಳೆದ ಹಲವು ತಿಂಗಳುಗಳಿಂದ ಚರ್ಚೆಯಲ್ಲಿದೆ. ಆದರೀಗ ಕಂಪನಿಯು ಹೊಸ ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎಂದು ತೋರುತ್ತಿದೆ. ಹಿಂದೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಂದರೆ ಬಿಐಎಸ್ ವೆಬ್‌ಸೈಟ್‌ನಲ್ಲಿ ಈ ಫೋನನ್ನು ಗುರುತಿಸಲಾಗಿತ್ತು.

ವಿವೋ T3X 5G ಅಪ್​ಗ್ರೇಡ್​ ವರ್ಷನ್​: ವಿವೋದ ಮುಂಬರುವ ಸ್ಮಾರ್ಟ್‌ಫೋನ್ ಕಳೆದ ವರ್ಷ 13,499 ರೂ.ಗೆ ಬಿಡುಗಡೆಯಾದ ವಿವೋ T3X 5Gನ ಅಪ್‌ಗ್ರೇಡ್ ಆವೃತ್ತಿ. ಈಗ ಕಂಪನಿಯು ಫ್ಲಿಪ್‌ಕಾರ್ಟ್‌ನಲ್ಲಿ ಟೀಸರ್ ಬಿಡುಗಡೆ ಮಾಡುವ ಮೂಲಕ ವಿವೋ T4X 5G ಫೋನ್ ಬಿಡುಗಡೆಯನ್ನು ಕನ್ಫರ್ಮ್​ ಮಾಡಿದೆ. ವಿವೋದ ಹೊಸ ಫೋನ್‌ನ ಮೈಕ್ರೋಸೈಟ್ ಅನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಈ ವಿಭಾಗದಲ್ಲಿ ಅತಿ ದೊಡ್ಡ ಬ್ಯಾಟರಿ ಹೊಂದಿರುತ್ತದೆ ಎಂದು ಕಂಪನಿ ತನ್ನ ಟೀಸರ್‌ನಲ್ಲಿ ಹೇಳಿದೆ.

ಆದರೂ ಫೋನ್‌ನ ಬ್ಯಾಟರಿ ಸಾಮರ್ಥ್ಯ ಮತ್ತು ಇತರ ವಿಶೇಷತೆಗಳ ಬಗ್ಗೆ ವಿವೋ ಇನ್ನೂ ನಿಖರ ಮಾಹಿತಿ ನೀಡಿಲ್ಲ. ಆದರೆ ವಿವೋ ಟಿ3ಎಕ್ಸ್ 5ಜಿ ಯಲ್ಲಿ 6000mAh ಬ್ಯಾಟರಿ ನೀಡಿದೆ. ಕಂಪನಿ ವಿವೋ T4X 5G ಯಲ್ಲಿ 6,500mAh ಬ್ಯಾಟರಿಯನ್ನು ಒದಗಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಇದಲ್ಲದೆ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ನೊಂದಿಗೆ ಫೋನ್ ಬಿಡುಗಡೆ ಮಾಡಬಹುದು. ಒಂದು ವರದಿಯ ಪ್ರಕಾರ, ಚಿಪ್‌ಸೆಟ್ 7,28,000 AnTuTu ಗಳಿಸಿದೆ. ಕಳೆದ ವರ್ಷ ಬಿಡುಗಡೆಯಾದ ವಿವೋ T3X 5G ಯಲ್ಲಿ ಸ್ನಾಪ್‌ಡ್ರಾಗನ್ 6 Gen 1 ಚಿಪ್‌ಸೆಟ್ ನೀಡಿತ್ತು.

ಬಿಡುಗಡೆ ಮತ್ತು ಬೆಲೆ: ಇವುಗಳ ಹೊರತಾಗಿ ಕಂಪನಿ ಈ ಫೋನ್‌ನಲ್ಲಿ ಡೈನಾಮಿಕ್ ಲೈಟ್ ಫೀಚರ್ಸ್​ ಒದಗಿಸಬಹುದು. ಇದರ ಮೂಲಕ ಬಳಕೆದಾರರು ಕಸ್ಟಮೈಸ್ಡ್​ ಲೈಟಿಂಗ್​ ಎಫೆಕ್ಟ್ಸ್‌ ಜೊತೆ ನೋಟಿಫಿಕೇಶನ್​ ರಿಸೀವ್​ ಮಾಡಲು ಸಾಧ್ಯವಾಗುತ್ತದೆ. ಫೋನ್ ಅನ್ನು ಪರ್ಪಲ್​ ಮತ್ತು ಬ್ಲೂ ಎಂಬೆರಡು ಬಣ್ಣಗಳ ಆಯ್ಕೆಗಳಲ್ಲಿ ಮಾರ್ಚ್​ನಲ್ಲಿ ಬಿಡುಗಡೆ ಮಾಡಬಹುದು. ಬೆಲೆ ಸುಮಾರು 15 ಸಾವಿರ ರೂ.ಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *