ಪ್ರೀಮಿಯಂ ಸ್ಲಿಮ್ ಡಿಸೈನ್ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿವೋ, ಮಿಡಲ್ ರೇಂಜ್ನಲ್ಲಿ ಇದೇ ಟಾಪ್ – VIVO V50 LAUNCHED IN INDIA
ವಿವೋ ಇಂದು ತನ್ನ ಹೊಸ ಸ್ಮಾರ್ಟ್‌ಫೋನ್ ವಿವೋ ವಿ50 ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ ಪವರ್ಫುಲ್ ಬ್ಯಾಟರಿ ಹೊಂದಿದ್ದು, ಹಲವು AI ವೈಶಿಷ್ಟ್ಯಗಳಿವೆ.
VIVO V50 LAUNCHED IN INDIA : ಬಹಳದಿಂದ ಕಾಯುತ್ತಿದ್ದ ವಿವೋ ಹೊಸ ಸ್ಮಾರ್ಟ್‌ಫೋನ್ ಕೊನೆಗೂ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಕಂಪನಿಯು ಇಂದು ಮಧ್ಯಾಹ್ನ 12 ಗಂಟೆಗೆ ‘ವಿವೋ ವಿ50’ ಅನ್ನು ಬಿಡುಗಡೆ ಮಾಡಿತು. ಕಂಪನಿಯು ಇದನ್ನು ಸ್ಲಿಮ್ ಡಿಸೈನ್, ಪೊರ್ಟ್ರೈಟ್ ಪಿಕ್ಚರ್ಸ್ ZEISS-ಬ್ರಾಂಡ್ ಕ್ಯಾಮರಾದೊಂದಿಗೆ ಪರಿಚಯಿಸಿದೆ. ಈ ವರ್ಷ ವಿವೋದಿಂದ ಬಂದ ವಿ-ಸೀರಿಸ್ ಮೊದಲ ಡಿವೈಸ್ ಇದಾಗಿದೆ. ಆದ್ರೆ ಕಂಪನಿಯು ತನ್ನ ಪ್ರೊ ವೆರಿಯಂಟ್ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿಲ್ಲ.
‘ವಿವೋ ವಿ50’ ಸ್ಮಾರ್ಟ್‌ಫೋನ್ ಇತ್ತೀಚೆಗೆ ನವೆಂಬರ್ 2024 ರಲ್ಲಿ ಚೀನಾದಲ್ಲಿ ಬಿಡುಗಡೆಯಾದ ‘ವಿವೋ ಎಸ್20’ ನ ರೀಬ್ರಾಂಡೆಡ್ ಆವೃತ್ತಿಯಾಗಿದೆ. ಈಗ ಕಂಪನಿಯು ಇದನ್ನು ಪ್ರೀಮಿಯಂ ಡಿಸೈನ್ ಎಲಿಮೆಂಟ್ಸ್, ಅಡ್ವಾನ್ಸ್ಡ್ ಕ್ಯಾಮರಾಗಳು ಮತ್ತು ಪರ್ಸನಲ್ ಅಸಿಸ್ಟನ್ಸ್ ಎಐ ಫೀಚರ್ಗಳೊಂದಿಗೆ ದೇಶಿಯ ಮಾರುಕಟ್ಟೆಗೆ ತಂದಿದೆ.
ಈ ಫೋನ್ ಮಿಡಲ್ ರೇಂಜ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುತ್ತದೆ ಎಂದು ಕಂಪನಿ ಆಶಿಸುತ್ತದೆ. ಇದರ ಜೊತೆ ವಿವೋ ಈ ಸ್ಮಾರ್ಟ್‌ಫೋನ್‌ನಲ್ಲಿ ಲಾಂಚ್ ಆಫರ್‌ಗಳನ್ನು ಸಹ ಘೋಷಿಸಿದೆ. ಇದರ ಬೆಲೆ, ಸ್ಪೇಸಿಫಿಕೇಶನ್ ಮತ್ತು ಆಫರ್ಗಳು ಸೇರಿದಂತೆ ಇನ್ನಿತರ ವಿವರ ಈ ಕೆಳಗಿನಂತಿದೆ..
ಸ್ಮಾರ್ಟ್ ಎಐ ಫೀಚರ್ಸ್ : ಕಂಪನಿಯು ಇದನ್ನು ಸ್ಮಾರ್ಟ್ ಎಐ ವೈಶಿಷ್ಟ್ಯಗಳೊಂದಿಗೆ ತಂದಿದೆ. ಇದು ಗೂಗಲ್ನೊಂದಿಗೆ ಸರ್ಕಲ್ ಟು ಸರ್ಚ್, ಲೈವ್ ಕಾಲ್ ಟ್ರಾನ್ಸ್‌ಲೇಷನ್, ಎಐ ಟ್ರಾನ್ಸ್‌ಸ್ಕ್ರಿಪ್ಟ್ ಅಸಿಸ್ಟ್ ಮತ್ತು ಎಐ ಸ್ಕ್ರೀನ್ ಟ್ರಾನ್ಸ್‌ಲೇಷನ್‌ನಂತಹ ಎಐ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ವಿವೋ ವಿ50 ಸ್ಪೇಸಿಫಿಕೇಶನ್ಗಳು :
ಡಿಸ್‌ಪ್ಲೇ : ಈ ಫೋನ್ 6.77-ಇಂಚಿನ ಕ್ವಾಡ್-ಕರ್ವ್ಡ್ AMOLED ಸ್ಕ್ರೀನ್ ಜೊತೆಗೆ ಫುಲ್ HD+ ರೆಸಲ್ಯೂಶನ್ (2392 x 1080 ಪಿಕ್ಸೆಲ್‌ಗಳು), 120Hz ವರೆಗೆ ರಿಫ್ರೆಶ್ ರೇಟ್, P3 ವೈಡ್ ಕಲರ್ ಗ್ಯಾಮಟ್ ಮತ್ತು 4,500 nits ಲೋಕಲ್ ಪೀಕ್ ಬ್ರೈಟ್‌ನೆಸ್ ಹೊಂದಿದೆ. ಇದಲ್ಲದೆ ವಿವೋ ಇದನ್ನು ಡೈಮಂಡ್ ಶೀಲ್ಡ್ ಗ್ಲಾಸ್ ಪ್ರೊಟೆಕ್ಷನ್ ಜೊತೆ ತಂದಿದೆ. ಇದು ತನ್ನ ಹಿಂದಿನ ಶಾಟ್ ಗ್ಲಾಸ್‌ಗಿಂತ ಶೇಕಡಾ 50 ರಷ್ಟು ಹೆಚ್ಚು ಡ್ರಾಪ್-ರೆಸಿಸ್ಟೆಂಟ್ ಇದೆ ಎಂದು ಕಂಪನಿ ಹೇಳಿದೆ.
ಪ್ರೊಸೆಸರ್ : ಪ್ರೊಸೆಸರ್‌ಗಾಗಿ ಕಂಪನಿಯು ಈ ‘ವಿವೋ V50’ ಸ್ಮಾರ್ಟ್‌ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 7 ಜೆನ್ 3 ಚಿಪ್‌ಸೆಟ್ ಅನ್ನು ಒದಗಿಸಿದೆ.
ಸ್ಟೋರೇಜ್ : ಇದನ್ನು 12GB ವರೆಗೆ LPDDR4X RAM ಮತ್ತು 512GB ವರೆಗೆ UFS 2.2 ಸ್ಟೋರೇಜ್ನೊಂದಿಗೆ ವಿಸ್ತರಿಸಬಹುದು.
ಪ್ರೊಟೆಕ್ಷನ್ : ಈ ಡಿವೈಸ್ ಡಸ್ಟ್ ಆ್ಯಂಡ್ ವಾಟರ್ ರೆಸಿಸ್ಟೆನ್ಸಿ ಜೊತೆ IP68 ಮತ್ತು IP69 ರೇಟಿಂಗ್‌ಗಳೊಂದಿಗೆ ಬರುತ್ತದೆ.
ಕ್ಯಾಮೆರಾ ಸೆಟಪ್ : ಈ ಫೋನ್ ಡ್ಯುಯಲ್ ಕ್ಯಾಮರಾ ಸೆಟಪ್ ಹೊಂದಿದೆ. ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಹೊಂದಿರುವ 50MP ಪ್ರೈಮರಿ ರಿಯರ್ ಸೆನ್ಸಾರ್ ಮತ್ತು AF (ಆಟೋಫೋಕಸ್) ಹೊಂದಿರುವ 50MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಮುಖ್ಯವಾಗಿ ಈ ಎರಡೂ ಲೆನ್ಸ್‌ಗಳು 4K ವಿಡಿಯೋ ರೆಕಾರ್ಡಿಂಗ್ ಅನ್ನು ಸಪೋರ್ಟ್ ಮಾಡುತ್ತವೆ. ಅಷ್ಟೇ ಅಲ್ಲದೇ ಈ ಫೋನ್ನಲ್ಲಿ AF ಮತ್ತು 92-ಡಿಗ್ರಿ ಫೀಲ್ಡ್ ಆಫ್ ವ್ಯೂ ಹೊಂದಿರುವ 50MP ಸೆಲ್ಫಿ ಕ್ಯಾಮರಾ ಇದೆ. ಸಿನಿಮಾಟಿಕ್ ಬ್ಲರ್ ಜೊತೆ ಪೊರ್ಟ್ರೈಟ್ ಶಾಟ್ಗಳನ್ನು ಕ್ಯಾಪ್ಚರ್ ಮಾಡುವುದಕ್ಕೆ ಏಳು ಕ್ಲಾಸಿಕ್ Zeiss-ಸ್ಟೈಲ್ ಬೊಕೆ ಎಫೆಕ್ಟ್ ಅನ್ನು ಒದಗಿಸುವುದಕ್ಕೆ ಕಂಪನಿ ಈ ಮೂರು ಲೆನ್ಸ್ಗಳನ್ನು ZEISS ಕಂಪನಿಯೊಂದಿಗೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಿದೆ.
ಬ್ಯಾಟರಿ : ವಿವೋದ ಈ ಹೊಸ ವಿ-ಸೀರಿಸ್ನ ಸ್ಮಾರ್ಟ್‌ಫೋನ್ 6000mAh ಬ್ಯಾಟರಿಯನ್ನು ಹೊಂದಿದೆ. ಇದು 90W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಈ ಬ್ಯಾಟರಿ ವಿಭಾಗದಲ್ಲಿ ಭಾರತದಲ್ಲಿ ವಿನ್ಯಾಸಗೊಳಿಸಲಾದ ಅತ್ಯಂತ ಸ್ಲಿಮ್ ಡಿಸೈನ್ ಸ್ಮಾರ್ಟ್‌ಫೋನ್ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಆಪರೇಟಿಂಗ್ ಸಿಸ್ಟಮ್ : ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ಫನ್‌ಟಚ್ ಒಎಸ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇತರ ವೈಶಿಷ್ಟ್ಯಗಳು : ಇದು ಬ್ಲೂಟೂತ್ 5.4 ಕನೆಕ್ಟಿವಿಟಿ, ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಬರುತ್ತದೆ.
ಕಲರ್ ಆಪ್ಷನ್ : ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ರೋಸ್ ರೆಡ್, ಸ್ಟಾರೀ ನೈಟ್ ಮತ್ತು ಟೈಟಾನಿಯಂ ಗ್ರೇ ಎಂಬ ಮೂರು ಕಲರ್ಗಳ ಆಯ್ಕೆಗಳಲ್ಲಿ ಲಭ್ಯವಿದೆ.
ವಿವೋ ವಿ50 ವೆರಿಯಂಟ್ಸ್ : ಕಂಪನಿಯು ಇದನ್ನು 8GB RAM + 128GB ಸ್ಟೋರೇಜ್, 8GB RAM + 256GB ಸ್ಟೋರೇಜ್ ಮತ್ತು 12GB RAM + 512GB ಸ್ಟೋರೇಜ್ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ.
ವಿವೋ ವಿ50 ಬೆಲೆಗಳು :
- ‘ವಿವೋ ವಿ50’ 8 ಜಿಬಿ RAM + 128 ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ: ರೂ. 34,999.
- ‘ವಿವೋ ವಿ50’ 8 ಜಿಬಿ RAM + 256 ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ: ರೂ. 36,999.
- ‘ವಿವೋ ವಿ50’ 12GB RAM + 512GB ಸ್ಟೋರೇಜ್ ರೂಪಾಂತರದ ಬೆಲೆ: ರೂ. 40,999
ಲಾಂಚ್ ಆಫರ್ಗಳು : ಕಂಪನಿಯ ಬಿಡುಗಡೆ ಕೊಡುಗೆಯ ಭಾಗವಾಗಿ ‘ವಿವೋ V50’ ಜೊತೆಗೆ ‘ವಿವೋ TWS 3e’ ಇಯರ್‌ಬಡ್ಸ್ 1,499 ರೂ.ಗಳಿಗೆ ರಿಯಾಯಿತಿಯಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ, ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಈ ಹೊಸ ಸ್ಮಾರ್ಟ್‌ಫೋನ್ ಖರೀದಿಗೆ ವಿವೋ ಶೇಕಡಾ 10 ರಷ್ಟು ಕ್ಯಾಶ್‌ಬ್ಯಾಕ್ ಅಥವಾ ಶೇಕಡಾ 10 ರಷ್ಟು ಇನ್ಸ್ಟಂಟ್ ಡಿಸ್ಕೌಂಟ್ ಸಹ ನೀಡುತ್ತಿದೆ. ಇದರ ಜೊತೆಗೆ, ಗ್ರಾಹಕರು ಈ ಹೊಸ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ಶೇಕಡಾ 10 ರಷ್ಟು ಕ್ಯಾಶ್‌ಬ್ಯಾಕ್ ಬೋನಸ್, ಆರು ತಿಂಗಳ ನೋ-ಕಾಸ್ಟ್ ಇಎಂಐ ಮತ್ತು ಒಂದು ವರ್ಷದ ಎಕ್ಸ್ಟೆಂಡೆಡ್ ವಾರಂಟಿ ಸಹ ಪಡೆಯಬಹುದು.
ಮಾರಾಟ : ವಿವೋದ ಈ ಹೊಸ ಸ್ಮಾರ್ಟ್‌ಫೋನ್‌ಗಾಗಿ ಪ್ರೀ-ಬುಕಿಂಗ್‌ಗಳು ಈಗ ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಭಾರತದಲ್ಲಿ ಕಂಪನಿಯ ಅಧಿಕೃತ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ತೆರೆದಿವೆ. ಇದು ರಿಲಯನ್ಸ್ ಡಿಜಿಟಲ್, ಕ್ರೋಮಾ, ವಿಜಯ್ ಸೇಲ್ಸ್, ಬಿಗ್ ಸಿ, ಲೊಟ್ಟೆ, ಬಜಾಜ್ ಎಲೆಕ್ಟ್ರಾನಿಕ್ಸ್ ಮತ್ತು ಇತರ ಪ್ರಮುಖ ರಿಟೇಲ್ ಶಾಪ್ಗಳಲ್ಲಿಯೂ ಮಾರಾಟಕ್ಕೆ ಲಭ್ಯವಿರುತ್ತದೆ. ಆದರೂ ಈ ಫೋನ್ ಫೆಬ್ರವರಿ 25 ರಿಂದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ.
I want to buy this product , where i can get this..
yes sure…u can purchase it from flipkart & amazon or local stores