ಮಹಾಕುಂಭ ಮೇಳದಲ್ಲಿ ಕಣ್ಣೇದುರು ಕತ್ರಿನಾ ಕೈಫ್ ಸ್ನಾನ ಮಾಡುತ್ತಿರುವುದನ್ನು ಕಂಡು ಅಂಧಭಕ್ತರು ಮಾಡಿದ್ದೇನು ?
ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸೋದು ಕಾಮನ್ನು. ಇದನ್ನು ಅತಿಯಾದ ಅಭಿಮಾನ ಎನ್ನಬೇಕೋ? ಅಥವಾ ಹುಚ್ಚಾಟ ಎನ್ನಬೇಕೋ ಗೊತ್ತಿಲ್ಲ.
ಒಟ್ನಲ್ಲಿ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ತಾರೆಯರು ಪ್ರತಿದಿನ ನರಳುವಂತಾಗಿದೆ.ಇದರ ನಡುವೆ ಸೆಲೆಬ್ರಿಟಿಗಳ ಅರಿವಿಗೆ ಬಾರದಂತೆ ಕದ್ದು ಮುಚ್ಚಿ ವಿಡಿಯೋ ಸೆರೆ ಹಿಡಿಯುವ, ಆ ವಿಡಿಯೋವನ್ನು ವೈರಲ್ ಮಾಡುವ ಅಂಧಾಭಿಮಾನಿಗಳ ಸಂತತಿ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ವೈರಲ್ ಆದ ಕತ್ರಿನಾ ಕೈಫ್ ವಿಡಿಯೋ ಮತ್ತೊಂದು ಉದಾಹರಣೆ.
ಹೌದು,ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳನ್ನೊಪ್ಪಿಕೊಂಡು ಬ್ಯುಸಿಯಾಗಿದ್ದ ಕತ್ರಿನಾ ಕೈಫ್ ಮೊನ್ನೆ ಮಹಾ ಕುಂಭ ಮೇಳಕ್ಕೆ ಹೋಗಿದ್ದರು. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದರು. ಮಹಾಕುಂಭ ಮೇಳದಲ್ಲಿ ಕತ್ರೀನಾ ಕೈಫ್ ಪುಣ್ಯ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು ಕೂಡ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಅನೇಕರು ಹಿಂದೂ ಧರ್ಮದ ಮೇಲೆ ಕತ್ರಿನಾ ಕೈಫ್‌ಗೆ ಇರುವ ನಂಬಿಕೆ ಮತ್ತು ಒಲವನ್ನು ಕಂಡು ಬಾಯ್ತುಂಬ ಹೊಗಳಿದ್ದರು. ಏನು ನಯ ಏನು ವಿನಯ ಎಂಥಾ ಸಂಸ್ಕಾರ ಎಂದು ಹಾಡಿ ಹೊಗಳಿದ್ದರು. ಆದರೆ ಇದೇ ಸಮಯದಲ್ಲಿ ಕೆಲವರು ಸಂಸ್ಕಾರ ಮರೆತು ಶೋಕಿ ಮಾಡಿದ್ದಾರೆ. ತೀರಾ ಅಸಹ್ಯವಾಗಿ ವರ್ತಿಸಿದ್ದಾರೆ. ಆ ಪೈಕಿ ಒಂದು ವಿಡಿಯೋ ವೈರಲ್ ಆಗಿದ್ದು ಸದ್ಯ ಅಂಧಭಕ್ತರ ಪುಂಡಾಟವನ್ನು ಕಂಡು ಬಾಲಿವುಡ್ ನಟಿ ರವೀನಾ ಟಂಡನ್ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಹೌದು, ಅಸಲಿಗೆ ಕತ್ರಿನಾ ಕೈಫ್ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡುವ ಸಮಯದಲ್ಲಿ, ಅಲ್ಲಿಯೇ ಕೂಗಳತೆಯ ದೂರದಲ್ಲಿದ್ದ ಇಬ್ಬರು ಮಹಾನುಭಾವರಲ್ಲಿ ಒಬ್ಬ ಕತ್ರೀನಾ ಕೈಫ್‌ಗೆ ಅರಿವು ಆಗದಂತೆ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.’ಇದು ನಾನು, ಇದು ನನ್ನ ಸಹೋದರ ಮತ್ತು ಇವರು ಕತ್ರೀನಾ ಕೈಫ್’ ಎಂದು ಹೇಳಿದ್ದಾನೆ. ಇದಕ್ಕೆ ಸುತ್ತಮುತ್ತಲಿನ ಜನ ನಕ್ಕಿದ್ದಾರೆ. ಕತ್ರೀನಾ ಅವರನ್ನು ಇನ್ನೂ ಹತ್ತಿರದಿಂದ ನೋಡಲು ಅಲ್ಲಿದ್ದ ಜನ ಮುಂದಕ್ಕೆ ತೆರಳಿದ್ದಾರೆ. ಮೇಲ್ನೋಟಕ್ಕೆ ತಮಾಷೆ ಎನಿಸುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರ ಆಕ್ರೋಶಕ್ಕೆ ಕೂಡ ಈ ವಿಡಿಯೋ ಗುರಿಯಾಗಿದೆ. ಕತ್ರಿನಾ ಕೈಫ್ ಜೊತೆ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡಿದ್ದ ರವೀನಾ ಟಂಡನ್ ಅವರ ಕಣ್ಣಿಗೆ ಕೂಡ ಈ ವಿಡಿಯೋ ಬಿದ್ದಿದೆ.
ಈ ಹಿನ್ನೆಲೆ ವಿಡಿಯೋವನ್ನು ನೋಡಿ ಕೆರಳಿ ಕೆಂಡವಾಗಿರುವ ರವೀನಾ ಟಂಡನ್ ಸದ್ಯಕ್ಕೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಹಂಚಿಕೊಂಡು ಅತ್ಯಂತ ಅಸಹ್ಯಕರ ವರ್ತನೆ ಎಂದು ಖಂಡಿಸಿದ್ದಾರೆ. ಅರ್ಥಪೂರ್ಣವಾದ ಕ್ಷಣಗಳನ್ನು ಹೀಗೆ ಹಾಳು ಮಾಡುತ್ತಾರೆ ಎಂದು ಕೆಂಡ ಕಾರಿದ್ದಾರೆ. ಕೇವಲ ರವೀನಾ ಟಂಡನ್ ಮಾತ್ರವಲ್ಲ ಸಾಮಾನ್ಯ ಬಳಕೆದಾರರು ಕೂಡ ಈ ವಿಡಿಯೋವನ್ನು ನೋಡಿ ದಂಗಾಗಿದ್ದಾರೆ. ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಪುಣ್ಯ ಕ್ಷೇತ್ರದಲ್ಲಿ ಈ ರೀತಿ ನಡೆದುಕೊಳ್ಳುವರು ಅದೆಷ್ಟೇ ಬಾರಿ ಮುಳುಗಿ ಎದ್ದರು ಕೂಡ ಇವರ ಪಾಪಾ ನಾಶವಾಗಲ್ಲ ಎನ್ನುತ್ತಿದ್ದಾರೆ. ನಾಚಿಕೆಗೇಡಿನ ಸಂಗತಿ ಇದು, ಥೂ ನಿಮ್ಮ ಜನ್ಮಕ್ಕಿಷ್ಟು ಎಂದೆಲ್ಲ ವಿಡಿಯೋ ಮಾಡಿದ ವ್ಯಕ್ತಿಯನ್ನು ತೆಗಳುತ್ತಿದ್ದಾರೆ. ಸೆಲೆಬ್ರಿಟಿ ಆದ ಮಾತ್ರಕ್ಕೆ ಅವರ ಜೊತೆ ಹೇಗೆ ಬೇಕೋ ಹಾಗೇ ವರ್ತಿಸಬಹುದಾ ಎಂದು ಕೂಡ ಕೆಲವರು ಪ್ರಶ್ನೆಯನ್ನು ಕೇಳಿದ್ದಾರೆ.