ವಿದ್ಯಾರ್ಥಿ ನಾಪತ್ತೆ ಪ್ರಕರಣವನ್ನು ಧರ್ಮದ್ವೇಷಕ್ಕೆ ಬಳಸಿಕೊಂಡ ಸಂಘಪರಿವಾರಕ್ಕೆ ಮುಖಭಂಗ
varthabharati – photos |
ಬಂಟ್ವಾಳ: ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಫರಂಗಿಪೇಟೆಯ ಕಿದೆಬೆಟ್ಟು ನಿವಾಸಿ, ವಿದ್ಯಾರ್ಥಿ ದಿಗಂತ್ ಸುಮಾರು 10 ದಿನಗಳ ಬಳಿಕ ಮಾ.8ರಂದು ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಇದನ್ನು ದ.ಕ. ಜಿಲ್ಲಾ ಎಸ್ಪಿ ಯತೀಶ್ ಎನ್ ಖಚಿತಪಡಿಸಿದ್ದಾರೆ.
ದಿಗಂತ್ ನನ್ನು ಪೊಲೀಸರು ಬಂಟ್ವಾಳಕ್ಕೆ ಕರೆ ತರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳ, ಡ್ರೋನ್, ಶ್ವಾನ ದಳ ಸೇರಿದಂತೆ ದ.ಕ.ಜಿಲ್ಲೆಯ ಪೊಲೀಸ್ ಠಾಣೆಯ ಸುಮಾರು 150 ಪೊಲೀಸ್ ಅಧಿಕಾರಿಗಳಿಂದ ಶನಿವಾರ ಶೋಧಕಾರ್ಯ ನಡೆಸಲಾಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಅವರುತಿಳಿಸಿದ್ದಾರೆ.
ಫೆ. 25ರಂದು ಸಂಜೆ ದೇವಸ್ಥಾನಕ್ಕೆ ಹೋಗುವುದಾಗಿ ದಿಗಂತ್ ಮನೆಯಲ್ಲಿ ತಿಳಿಸಿದ್ದು, ಆದರೆ ದೇವಸ್ಥಾನಕ್ಕೆ ಹೋಗದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದನು. ಆತನ ಚಪ್ಪಲಿಗಳಹಾಗೂ ಮೊಬೈಲ್ ಫೋನ್ ಮನೆಯ ಸಮೀಪದ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು.
ವಿದ್ಯಾರ್ಥಿ ನಾಪತ್ತೆ ಪ್ರಕರಣವನ್ನು ಧರ್ಮದ್ವೇಷಕ್ಕೆ ಬಳಸಿಕೊಂಡ ಸಂಘಪರಿವಾರಕ್ಕೆ ಮುಖಭಂಗ – Watch detailed video here