ಜೈಲಿಗೆ ಹೋಗಿ ಬಂದ್ರೂ ಕಮ್ಮಿ ಆಗದ ದಾಸನ ಕ್ರೇಜ್; ಒಂದೇ ದಿನಕ್ಕೆ ಡೆವಿಲ್ ಟೀಸರ್ ಗಳಿಸಿದ ವೀವ್ಸ್ ಎಷ್ಟು!?
ಸ್ಯಾಂಡಲ್‌ವುಡ್‌ನ ದಾಸ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಟೀಸರ್‌ಗೆ ಸಖತ್ ರೆಸ್ಪಾನ್ಸ್ ಬಂದಿದೆ. ಒಂದೇ ದಿನಕ್ಕೇನೆ ಮಿಲಿಯನ್ ಗಟ್ಟಲ್ಲೆ ವೀವ್ಸ್ ಬಂದಿವೆ. ಟಾಪ್ ಟ್ರೆಂಡಿಂಗ್ ಅಲ್ಲೂ ಇದು ಓಡ್ತಿದೆ. ಇದನ್ನ ಅಧಿಕೃತವಾಗಿಯೇ ಡೈರೆಕ್ಟರ್ ಮಿಲನ ಪ್ರಕಾಶ್ ಹೇಳಿಕೊಂಡಿದ್ದಾರೆ. ಇವರ ಈ ಮಾಹಿತಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.
ದಾಸ ದರ್ಶನ್ ಅಭಿನಯದ ಡೆವಿಲ್ ಚಿತ್ರದ ಟೀಸರ್ ಭಾರೀ ಸದ್ದು ಮಾಡಿದೆ. ರಿಲೀಸ್ ಆದ ಕೆಲವೇ ಗಂಟೆಯಲ್ಲಿಯೇ ಲಕ್ಷ ಲಕ್ಷ ವೀವ್ಸ್ ಪಡೆದಿದೆ. ಅಷ್ಟೇ ಅಲ್ಲ, ರಿಲೀಸ್ ಆದ ಇಡೀ ೨೪ ಗಂಟೆಯಲ್ಲಿ ಈ ಒಂದು ಟೀಸರ್‌ಗೆ ಬರೋಬ್ಬರಿ ಮೂರು ಮಿಲಿಯನ್ ವೀವ್ಸ್ ಬಂದಿವೆ ನೋಡಿ.
ಅಂದ್ರೆ, ದರ್ಶನ್ ಕ್ರೇಜ್ ಕಡಿಮೆ ಆಗಿಲ್ಲ ಅನ್ನೋದು ಇದೀಗ ಮತ್ತೆ ಸಾಬೀತಾಗಿದೆ. ಜೈಲು ಸೇರಿದಾಗ ಎಲ್ಲವೂ ಮುಗಿತು ಅಂದವ್ರೇ ಹೆಚ್ಚು ನೋಡಿ. ಜೈಲಿನಿಂದ ಹೊರ ಬಂದಾಗಲೂ ಅದೇ ಒಂದು ಮಾತು ಇತ್ತು. ಆದರೆ, ದರ್ಶನ್‌ಗೆ ರೆಗ್ಯುಲರ್ ಬೇಲ್ ಸಿಕ್ಮೇಲೆ ಎಲ್ಲರ ಅಭಿಪ್ರಾಯಗಳೂ ಬದಲಾಗಿವೆ ಅಂತಲೇ ಹೇಳಬಹುದು.
ಇನ್ನೇನು ಮುಗಿದೇ ಬಿಡ್ತು…ಡೆವಿಲ್ ಚಿತ್ರದ ಕಥೆ ಮುಗಿತು ಅನ್ನೋರಿಗೂ ಡೆವಿಲ್ ಟೀಸರ್ ಇದೀಗ ಉತ್ತರ ಕೊಟ್ಟಂತೆ ಇದೆ. ದರ್ಶನ್ ಜನ್ಮ ದಿನ ಆಚರಿಸಿಕೊಳ್ಳುತ್ತಿಲ್ಲ. ಇನ್ನೇನು ಬೇರೆ ಏನೂ ಬರೋದಿಲ್ಲ. ಹಾಗೆ ಅಂದುಕೊಂಡಿದ್ದ ಅದೆಷ್ಟು ಜನಕ್ಕೂ ಈ ಟೀಸರ್ ಉತ್ತರ ಕೊಟ್ಟಿದೆ. ಸಿನಿಮಾ ನಿಂತಿಲ್ಲ. ಅದು ಇದ್ದೇ ಇದೆ ಅನ್ನೋ ಅರ್ಥದಲ್ಲೂ ಈ ಟೀಸರ್ ಬಿಟ್ಟಂತೆ ಇದೆ.
ದರ್ಶನ್ ಜನ್ಮ ದಿನದ ಹಿನ್ನೆಲೆಯಲ್ಲಿಯೇ ಈ ಒಂದು ಟೀಸರ್ ರಿಲೀಸ್ ಮಾಡಲಾಗಿದೆ. ದರ್ಶನ್ ಅಭಿಮಾನಿಗಳು ಇದನ್ನ ನೋಡಿ ತುಂಬಾನೆ ಖುಷಿಪಟ್ಟಿದ್ದಾರೆ. ದರ್ಶನ್ ಡೆವಿಲ್ ಅವತಾರವನ್ನ ಕಂಡು ರೋಮಾಂಚನಗೊಂಡಿದ್ದಾರೆ. ಭರ್ಜರಿ ಆ್ಯಕ್ಷನ್ ಕಂಡು ಇನ್ನಿಲ್ಲದಂತೆ ಸಂತೋಷಪಟ್ಟಿದ್ದಾರೆ.
ದರ್ಶನ್ ಸಿನಿಮಾ ಜೀವನದಲ್ಲಿ ಡೆವಿಲ್ ವಿಶೇಷವಾಗಿಯೇ ಇದೆ. ಈ ಚಿತ್ರದಲ್ಲಿ ದರ್ಶನ್ ವಿಲನ್ ರೋಲ್ ಮಾಡಿದ್ದಾರೆ ಅನ್ನೋದು ಈಗಾಗಲೇ ಗೊತ್ತಾಗಿದೆ. ಇಷ್ಟೆಲ್ಲ ವಿಶೇಷತೆಯ ಈ ಒಂದು ಟೀಸರ್ ಹೆಚ್ಚು ಗಮನ ಸೆಳೆದಿದೆ. ಈ ಮೂಲಕ ದರ್ಶನ್ ವಿಭಿನ್ನವಾಗಿಯೇ ಎಲ್ಲರ ಗಮನ ಸೆಳೆದಿದ್ದಾರೆ.
ಇದರ ಮಧ್ಯೆ ಇದೀಗ ಸಿನಿಮಾದ ನಿರ್ಮಾಪಕ-ನಿರ್ದೇಶಕ ಮಿಲನ ಪ್ರಕಾಶ್ ತಮ್ಮ ಚಿತ್ರಕ್ಕೆ ಬಂದ ವೀವ್ಸ್‌ಗಳ ಮಾಹಿತಿ ಕೊಟ್ಟಿದ್ದಾರೆ. ಟೀಸರ್ ರಿಲೀಸ್ ಆದ ಒಂದೇ ದಿನಕ್ಕೆ ಏನೆಲ್ಲ ಆಗಿದೆ. ಯಾವ ರೀತಿಯ ರೆಸ್ಪಾನ್ಸ್ ಬಂದಿದೆ. ಟೀಸರ್ ಟ್ರೆಂಡಿಂಗ್ ಅಲ್ಲಿ ಇದಿಯಾ? ಬಂದ ವೀವ್ಸ್ ಎಷ್ಟು ಈ ರೀತಿಯ ಮಾಹಿತಿಯನ್ನ ಅಧಿಕೃತವಾಗಿಯೇ ಕೊಟ್ಟಿದ್ದಾರೆ.
ಡೆವಿಲ್ ಚಿತ್ರದ ಟೀಸರ್‌ಗೆ 30 ಲಕ್ಷ ವೀವ್ಸ್ ಬಂದಿವೆ. ಅಂದ್ರೆ, 3 ಮಿಲಿಯನ್ ವೀವ್ಸ್ ಬಂದಿವೆ ಅಂತಲೇ ಹೇಳಿಕೊಂಡಿದ್ದಾರೆ. ಟ್ರೆಂಡಿಂಗ್ ವಿಚಾರಕ್ಕೆ ಬಂದ್ರೂ ಅಷ್ಟೆ ನೋಡಿ. ಡೆವಿಲ್ ಟೀಸರ್ ಟಾಪ್ ಅಲ್ಲಿಯೇ ಇದೆ. ಟ್ರೆಂಡಿಂಗ್ ಅಲ್ಲಿಯೇ ಓಡ್ತಿದೆ ಅಂತಲೇ ಮಿಲನ ಪ್ರಕಾಶ್ ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ.
ಡೆವಿಲ್ ಚಿತ್ರದ ಕ್ರೇಜ್ ಮತ್ತೆ ಕ್ರಿಯೇಟ್ ಆಗಿದೆ. ಒಂದು ವರ್ಷದ ಹಿಂದೆ ಅಂದ್ರೆ, ಕಳೆದ ವರ್ಷದ ದರ್ಶನ್ ಜನ್ಮ ದಿನಕ್ಕೆ ಡೆವಿಲ್ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿತ್ತು. ಅದೇ ರೀತಿನೇ ಇದೀಗ ಚಿತ್ರದ ಎರಡನೇ ಟೀಸರ್ ರಿಲೀಸ್ ಆಗಿ ಎಲ್ಲರ ಗಮನ ಸೆಳೆದಿದೆ ಅಂತಲೇ ಹೇಳಬಹುದು.