ಮಹಿಳೆಯರಿಗಾಗಿ ರಾಮೋಜಿ ಫಿಲ್ಮ್ ಸಿಟಿಯಿಂದ ವಿಶೇಷ ಆಫರ್: ಇಲ್ಲಿದೆ ಸಂಪೂರ್ಣ ಮಾಹಿತಿ – RAMOJI FILM CITY WOMENS DAY
ರಾಮೋಜಿ ಫಿಲ್ಮ್ ಸಿಟಿ ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆ ಈ ತಿಂಗಳ ಅಂತ್ಯದವರೆಗೆ ಮಹಿಳಾ ಮಾಸಿಕ ಉತ್ಸವ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮಹಿಳೆಯರಿಗೆ ವಿಶೇಷ ಟಿಕೆಟ್ ಆಫರ್ ನೀಡಲಾಗಿದೆ.
ಹೈದರಾಬಾದ್: ವಿಶ್ವದ ಅತಿದೊಡ್ಡ ಚಲನಚಿತ್ರ ನಗರವಾದ ರಾಮೋಜಿ ಫಿಲ್ಮ್ ಸಿಟಿ ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆ ಈ ತಿಂಗಳ ಅಂತ್ಯದವರೆಗೆ ಮಹಿಳಾ ಮಾಸಿಕ ಉತ್ಸವ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರ ಭಾಗವಾಗಿ, ವಿಶೇಷ ಕಾರ್ಯಕ್ರಮಗಳೊಂದಿಗೆ ಮನರಂಜನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ವಯಸ್ಸಿನ ಮಹಿಳಾ ಅತಿಥಿಗಳನ್ನು ಮನರಂಜಿಸಲು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ, ಮಂತ್ರಮುಗ್ಧಗೊಳಿಸಲು ಸಜ್ಜಾಗಿದೆ.
ಈ ಮಹಿಳಾ ಮಾಸಿಕ ಉತ್ಸವಗಳಲ್ಲಿ ಭಾಗವಹಿಸಲು ಮತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮರೆಯಲಾಗದ ನೆನಪುಗಳನ್ನು ಹೊಂದಲು ಮಹಿಳೆಯರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಈ ಮಹಿಳಾ ಮಾಸಿಕ ಉತ್ಸವ ವಿಶೇಷ ಕಾರ್ಯಕ್ರಮಗಳು ಮತ್ತು ಸಿಹಿ ಫಿಲ್ಮ್ ಸಿಟಿ ಸ್ಟುಡಿಯೋ ಪ್ರವಾಸ ಮಾಡಲು ಅವಕಾಶ ಇದೆ. ಇದರ ಜೊತೆಗೆ, ಮಹಿಳೆಯರಲ್ಲಿ ಸೃಜನಶೀಲತೆಯನ್ನು ಪ್ರೋತ್ಸಾಹಿಸಲು ಆಯೋಜಿಸಿರುವ ಮಹಿಳಾ ಮಾಸಿಕ ಉತ್ಸವವನ್ನು ಪ್ರತಿಯೊಬ್ಬ ಮಹಿಳೆಯೂ ಸಂತೋಷದಲ್ಲಿ ಮಿಂದೆಳುವಂತೆ ವಿನ್ಯಾಸಗೊಳಿಸಲಾಗಿದೆ.
- ಫಿಲ್ಮ್ ಸಿಟಿಯಲ್ಲಿ ಅವಿಸ್ಮರಣೀಯ ಕ್ಷಣಗಳನ್ನು ಕಳೆಯಲು ಮಹಿಳಾ ಮಾಸಿಕ ಉತ್ಸವ ಮಹಿಳೆಯರಿಗೆ ವಿಶೇಷ ಆಹ್ವಾನ ನೀಡುತ್ತಿದೆ.
- ಅದ್ಭುತವಾದ ಸ್ಟುಡಿಯೋ ಟೂರ್ ಆನಂದಿಸಲು ಮಹಿಳಾ ಅತಿಥಿಗಳಿಗೆ ಅವಕಾಶ ನೀಡಲಾಗಿದೆ.
- ಸಹಸ್ ಅಡ್ವೆಂಚರ್ ಲ್ಯಾಂಡ್‌ನಲ್ಲಿ ಎಂಜಾಯ್ ಮಾಡಬಹುದು.
- ಸಿನಿಮಾ ಸೆಟ್‌ಗಳು, ಲೈವ್ ಶೋ , ರೈಡ್ಸ್ ಮತ್ತು ರೋಮಾಂಚಕ ಸಾಹಸಗಳನ್ನು ನೇರವಾಗಿ ನೋಡಬಹುದು.
- ಪೌರಾಣಿಕ ಸಿನಿಮಾ ಸೆಟ್‌ಗೆ ಭೇಟಿ
- ಪಕ್ಷಿಗಳ ಪಾರ್ಕ್
- ಚಿಟ್ಟೆ ಪಾರ್ಕ್
- ಬಾಹುಬಲಿ ಸಿನಿಮಾ ಸೆಟ್
- ಮೋಷನ್ ಕ್ಯಾಪ್ಚರ್
- ವರ್ಚುಯಲ್ ಶೂಟ್
- ರೆಸ್ಟೋರೆಂಟ್‌ಗಳಲ್ಲಿ ರುಚಿಯಾದ ಆಹಾರ
- ನೆನಪಿಗಾಗಿ ವಸ್ತುಗಳ ಖರೀದಿಗೆ ವ್ಯವಸ್ಥೆ ಇದೆ
ರಾಜಸ್ಥಾನಿ ಪ್ರದರ್ಶನ: ಫಿಲ್ಮ್ ಸಿಟಿಯಲ್ಲಿ ಇಂತಹ ಅನೇಕ ವಿಶೇಷ ಕಾರ್ಯಕ್ರಮಗಳು ಮನರಂಜಿಸುತ್ತಿವೆ. ಈ ಕಾರ್ಯಕ್ರಮಗಳು ಮಹಿಳಾ ಥೀಮ್ನೊಂದಿ ಪ್ರಾರಂಭವಾಗುತ್ತವೆ. ಕೊನೆಯಲ್ಲಿ ಅತಿಥಿಗಳನ್ನು ರಂಜಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಜಸ್ಥಾನಿ ಪ್ರದರ್ಶನ ಮತ್ತು ಟ್ಯಾಲೆಂಟ್ ಹಂಟ್ ಸೇರಿದಂತೆ ವಿಶೇಷ ಕಾರ್ಯಕ್ರಮಗಳು ಮಹಿಳಾ ಮಾಸಿಕ ಉತ್ಸವದಲ್ಲಿ ಮಹಿಳಾ ಅತಿಥಿಗಳಿಗೆ ಮರೆಯಲಾರದ ಅನುಭವ ನೀಡಲಿದೆ.
ಟಿಕೆಟ್ ಬುಕ್ ಮಾಡಲು, www.ramojifilmcity.com ಗೆ ಭೇಟಿ ನೀಡಿ ಅಥವಾ 7659876598 ಗೆ ಕರೆ ಮಾಡಿ.
ಮಹಿಳೆಯರಿಗೆ ವಿಶೇಷ ಆಫರ್: ರಾಮೋಜಿ ಫಿಲ್ಮ್ ಸಿಟಿ ಮಹಿಳಾ ಅತಿಥಿಗಳಿಗಾಗಿ ವಿಶೇಷ ಕೂಡುಗೆ ನೀಡುತ್ತಿದೆ. ಅದರ ಭಾಗವಾಗಿ, ಮಹಿಳೆಯರಿಗೆ 1,099 ರೂ.ಗಳ ಪ್ರವೇಶ ಟಿಕೆಟ್( ಜಿಎಸ್ಟಿ ಸೇರಿ) ದರ ಇದೆ. ಈ ತಿಂಗಳಲ್ಲಿ ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ ನೀಡಲು, ಮಹಿಳೆಯರು ಕನಿಷ್ಠ ಒಂದು ದಿನ ಮುಂಚಿತವಾಗಿ ಟಿಕೆಟ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬೇಕು.