ಭಾರತದಲ್ಲಿ ₹400 ಕೋಟಿ ಕಲೆಕ್ಷನ್: ಮಾ.7ಕ್ಕೆ ತೆಲುಗಿನಲ್ಲಿ ‘ಛಾವಾ’ ಬಿಡುಗಡೆ – CHHAAVA COLLECTION
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಛಾವಾ’ ಭಾರತದಲ್ಲಿ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಛಾವಾ’ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಚಿತ್ರದ ಶೀರ್ಷಿಕೆಯನ್ನು ಮರಾಠಿಯಿಂದ ಪಡೆಯಲಾಗಿದ್ದು, ಇದರರ್ಥ “ಸಿಂಹದ ಮರಿ”. ಛತ್ರಪತಿ ಸಂಭಾಜಿ ಮಹಾರಾಜರ ಸುತ್ತ ಹೆಣೆಯಲಾಗಿರುವ ಈ ಚಿತ್ರ ಫೆಬ್ರವರಿ 14ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿತು.
ಸಿನಿಮಾ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಮತ್ತು ವಿನೀತ್ ಕುಮಾರ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಎರಡು ವಾರಗಳ ಉತ್ತಮ ಪ್ರದರ್ಶನದ ಫಲವಾಗಿ, ಛಾವಾ ಭಾರತದಲ್ಲಿ 400 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹಿಂದಿ ಭಾಷೆಯ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮಾರ್ಚ್ 7ರಂದು ತೆಲುಗಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.
14ನೇ ದಿನದ ಛಾವಾ ಬಾಕ್ಸ್ ಆಫೀಸ್ ಕಲೆಕ್ಷನ್: ಹಿಂದಿನ ದಿನಕ್ಕೆ ಹೋಲಿಸಿದರೆ ಛಾವಾ ತನ್ನ 14ನೇ ದಿನದಂದು ಗಳಿಕೆಯಲ್ಲಿ ಶೇ.43.48ರಷ್ಟು ಇಳಿಕೆ ಕಂಡಿದೆ. ಗುರುವಾರದಂದು 13.25 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಕಲೆಕ್ಷನ್ಗೆ ಮಹಾರಾಷ್ಟ್ರದ ಕೊಡುಗೆ ಹೆಚ್ಚಿದೆ.
ದಿನ | ಇಂಡಿಯಾ ಕಲೆಕ್ಷನ್ |
ದಿನ 1 | 31 ಕೋಟಿ ರೂಪಾಯಿ. |
ದಿನ 2 | 37 ಕೋಟಿ ರೂಪಾಯಿ. |
ದಿನ 3 | 48.5 ಕೋಟಿ ರೂಪಾಯಿ. |
ದಿನ 4 | 24 ಕೋಟಿ ರೂಪಾಯಿ. |
ದಿನ 5 | 25.25 ಕೋಟಿ ರೂಪಾಯಿ. |
ದಿನ 6 | 32 ಕೋಟಿ ರೂಪಾಯಿ. |
ದಿನ 7 | 21.5 ಕೋಟಿ ರೂಪಾಯಿ. |
ದಿನ 8 | 23.5 ಕೋಟಿ ರೂಪಾಯಿ. |
ದಿನ 9 | 44 ಕೋಟಿ ರೂಪಾಯಿ. |
ದಿನ 10 | 40 ಕೋಟಿ ರೂಪಾಯಿ. |
ದಿನ 11 | 18 ಕೋಟಿ ರೂಪಾಯಿ. |
ದಿನ 12 | 18.5 ಕೋಟಿ ರೂಪಾಯಿ. |
ದಿನ 13 | 23 ಕೋಟಿ ರೂಪಾಯಿ. |
ದಿನ 14 | 13.25 ಕೋಟಿ ರೂಪಾಯಿ (ಆರಂಭಿಕ ಅಂದಾಜು). |
ಒಟ್ಟು | 399.25 ಕೋಟಿ ರೂಪಾಯಿ. |
(ಡಾಟಾ ಮೂಲ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್).
ಗುರುವಾರ ‘ಛಾವಾ’ ಭಾರತದಲ್ಲಿ 13 ಕೋಟಿ ರೂಪಾಯಿ ಗಳಿಸೋ ಮೂಲಕ, ದೇಶೀಯ ವ್ಯವಹಾರ 399.25 ಕೋಟಿ ರೂಪಾಯಿಗೆ ಬಂದು ತಲುಪಿದೆ. ಮೊದಲ ವಾರ ಚಿತ್ರ 219.25 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ವಾರ 180 ಕೋಟಿ ರುಪಾಯಿಯ ವ್ಯವಹಾರ ನಡೆಸಿದೆ.
ವಾರ | ಗಳಿಕೆ |
ಮೊದಲ ವಾರ | 219.25 ಕೋಟಿ ರೂಪಾಯಿ. |
ಎರಡನೇ ವಾರ | 180 ಕೋಟಿ ರೂಪಾಯಿ. |
ಒಟ್ಟು | 399.25 ಕೋಟಿ ರೂಪಾಯಿ. |
(ಡಾಟಾ ಮೂಲ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್).
‘ಛಾವಾ’, ವಿಕ್ಕಿ ಕೌಶಲ್ ಅವರ ವೃತ್ತಿಜೀವನದಲ್ಲೇ ಬಿಗ್ ಹಿಟ್. ಈ ಐತಿಹಾಸಿಕ ನಾಟಕ, ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಬಾಕ್ಸ್ ಆಫೀಸ್ ಯಶಸ್ಸನ್ನು ಮೀರಿಸಿದೆ. 2019ರ ಈ ಸಿನಿಮಾ 244.14 ಕೋಟಿ ರೂಪಾಯಿಯ ವ್ಯವಹಾರ ನಡೆಸಿತ್ತು. ಛಾವಾ ಚಿತ್ರದ ಯಶಸ್ಸಿನೊಂದಿಗೆ ನಿರ್ಮಾಪಕ ದಿನೇಶ್ ವಿಜನ್ ಹಾಗೂ ನಾಯಕ ನಟಿ ರಶ್ಮಿಕಾ ಮಂದಣ್ಣ ತಮ್ಮ ಯಶಸ್ಸನ್ನು ಮುಂದುವರೆಸಿದ್ದಾರೆ. ದಿನೇಶ್ ವಿಜನ್ ಇತ್ತೀಚೆಗೆ ತಮ್ಮ ಚಲನಚಿತ್ರ ನಿರ್ಮಾಣ ಸಂಸ್ಥೆ ಮ್ಯಾಡಾಕ್ ಫಿಲ್ಮ್ಸ್ ಅಡಿಯಲ್ಲಿ ಬ್ಲಾಕ್ಬಸ್ಟರ್ ಹಿಟ್ ಸ್ಟ್ರೀ 2 ಅನ್ನು ಕೊಟ್ಟಿದ್ದರೆ, ರಶ್ಮಿಕಾ ವರಿಸು, ಅನಿಮಲ್ ಮತ್ತು ಪುಷ್ಪ 2: ದಿ ರೂಲ್‌ನಂತಹ ಸತತ ಹಿಟ್‌ಗಳನ್ನು ಕಂಡಿದ್ದಾರೆ.