ಏನಿದು ಪೂರ್ವ-ಅನುಮೋದಿತ ವೈಯಕ್ತಿಕ ಸಾಲ, ಪಡೆಯುವುದು ಹೇಗೆ?: ಯಾವುದೇ ದಾಖಲೆಗಳಿಲ್ಲದೇ ಕಡಿಮೆ ಬಡ್ಡಿ ಸಾಲ – PRE APPROVED LOAN ELIGIBILITY

 

ಏನಿದು ಪೂರ್ವ-ಅನುಮೋದಿತ ವೈಯಕ್ತಿಕ ಸಾಲ, ಪಡೆಯುವುದು ಹೇಗೆ?: ಯಾವುದೇ ದಾಖಲೆಗಳಿಲ್ಲದೇ ಕಡಿಮೆ ಬಡ್ಡಿ ಸಾಲ – PRE APPROVED LOAN ELIGIBILITY

ಪೂರ್ವ – ಅನುಮೋದಿತ ಸಾಲದಿಂದ ಅನೇಕ ಪ್ರಯೋಜನಗಳಿವೆ. ಕಂತೆ ಕಂತೆ ದಾಖಲೆಗಳ ಚಿಂತೆಯಿಲ್ಲ, ದೊಡ್ಡ ಬಡ್ಡಿಯ ಗೊಡವೆ ಇಲ್ಲ. ಕಮ್ಮಿ ಬಡ್ಡಿ, ಕಡಿಮೆ ದಾಖಲೆಗಳೊಂದಿಗೆ ತಕ್ಷಣವೇ ಸಾಲ ಮಂಜೂರಾತಿ!

Pre Approved Personal Loans : ಪೂರ್ವ ಅನುಮೋದಿತ ವೈಯಕ್ತಿಕ ಸಾಲದ ಕೊಡುಗೆಗಳಿಗಾಗಿ ಅನೇಕ ಜನರು ಕಾಯುತ್ತಿರುತ್ತಾರೆ. ನಿಗದಿತ ವ್ಯವಹಾರ ನಡೆಸುವವರಿಗೆ, ಹಣಕಾಸು ವ್ಯವಹಾರವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುವವರಿಗೆ ಬ್ಯಾಂಕ್​ ಗಳೇ ಈ ಆಫರ್ ನೀಡುತ್ತಿರುತ್ತವೆ. ಈ ವಿಚಾರ ತಿಳಿಯ ಬಯಸುವವರು, ಬ್ಯಾಂಕ್‌ಗಳ ಗ್ರಾಹಕ ಸೇವೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ. ಇಲ್ಲವೇ ನೀವು ಅಂತಹ ಸೌಲಭ್ಯಕ್ಕೆ ಅರ್ಹರಾಗಿದ್ದೀರಿ ಎಂದರೆ ಬ್ಯಾಂಕ್​ ಗ್ರಾಹಕ ಸೇವಾ ವಿಭಾಗದವರು ಕರೆ ಮಾಡಿ ಆಫರ್​ ಇರುವ ಬಗ್ಗೆ ತಿಳಿಸಿಕೊಡಬಹುದು. ಬನ್ನಿ ಹಾಗಾದರೆ ಪೂರ್ವ ಅನುಮೋದಿತ ಸಾಲದ ಕೊಡುಗೆಗಳು ಯಾವುವು? ಇದರಿಂದ ಏನು ಪ್ರಯೋಜನ? ಈ ಕೊಡುಗೆಗಳನ್ನು ಪಡೆಯುವುದು ಹೇಗೆ? ಎಂಬುದರ ಬಗ್ಗೆ ಅರಿತುಕೊಳ್ಳೋಣ.


ಉತ್ತಮ ಕ್ರೆಡಿಟ್​ ಸ್ಕೋರ್​​ ಇದ್ದರೆ ಇಂತಹ ಸಾಲಗಳು ಸುಲಭ: ಇಮೇಲ್‌, ಅಪ್ಲಿಕೇಶನ್ ಅಧಿಸೂಚನೆಗಳು ಮತ್ತು SMS ಮೂಲಕ ಬ್ಯಾಂಕ್‌ಗಳಿಂದ ಪೂರ್ವ- ಅನುಮೋದಿತ ಸಾಲದ ಕೊಡುಗೆಗಳ ಬಗ್ಗೆ ನಿಮಗೆ ಸಂದೇಶಗಳು ಬಂದಿರುತ್ತವೆ. ಈ ಮಾಹಿತಿಯೊಂದಿಗೆ ಇ-ಮೇಲ್‌ಗಳು, ಅಪ್ಲಿಕೇಶನ್ ಅಧಿಸೂಚನೆಗಳು, SMS ಮತ್ತು WhatsApp ಸಂದೇಶಗಳನ್ನು ಬ್ಯಾಂಕ್​​ ಗಳ ವೆರಿಫೈಡ್​​ ಸಂದೇಶಗಳು ರವಾನೆ ಆಗುತ್ತವೆ.ಈ ಸಂದೇಶಗಳನ್ನ ನೋಡಿ, ಆರ್ಥಿಕ ಅಗತ್ಯ ಇರುವವರು ಇಂತಹ ಸಾಲಗಳ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ. ಕೆಲವು ಬ್ಯಾಂಕುಗಳು ಈ ರೀತಿಯ ಸಾಲಗಳಿಗೆ ಸಂಸ್ಕರಣಾ ಶುಲ್ಕದಲ್ಲಿ ರಿಯಾಯಿತಿಗಳನ್ನು ನೀಡುತ್ತವೆ. ಒಮ್ಮೊಮ್ಮೆ ಇಂತಹ ಯಾವುದೇ ಶುಲ್ಕಗಳು ಕೂಡಾ ಇರುವುದಿಲ್ಲ. ಕೆಲವು ಬ್ಯಾಂಕ್‌ಗಳು ಈ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತವೆ. ಉತ್ತಮ CIBIL ಸ್ಕೋರ್ ಹೊಂದಿರುವವರು ಕಡಿಮೆ ಬಡ್ಡಿ ದರದೊಂದಿಗೆ ಪೂರ್ವ ಅನುಮೋದಿತ ಸಾಲದ ಕೊಡುಗೆಗಳನ್ನು ಹೆಚ್ಚಾಗಿ ಪಡೆಯುತ್ತಾರೆ.

ಪೂರ್ವ ಅನುಮೋದಿತ ಸಾಲ ಎಂದರೇನು?: ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಯಿಂದ ನಿಮಗೆ ಸಿಗುವ ಕೊಡುಗೆ ಆಗದೆ. ಪೂರ್ವ-ಅನುಮೋದಿತ ಸಾಲದ ಬಗ್ಗೆ ನಿಮಗೆ ಆಫರ್​ ಬಂದಿದೆ ಎಂದರೆ ಬ್ಯಾಂಕ್​ ಅಥವಾ NBFC ನಿಮ್ಮ ಪ್ರೊಫೈಲ್ ಅನ್ನು ಮೊದಲೇ ಪರಿಶೀಲಿಸಿದೆ ಎಂದರ್ಥ. ನೀವು ಸಾಲಕ್ಕೆ ಅರ್ಹರಾಗಿದ್ದೀರಾ ಎಂಬುದನ್ನು ಹಣಕಾಸು ಸಂಸ್ಥೆಗಳು ಮೊದಲೇ ಈ ಬಗ್ಗೆ ನಿರ್ಧರಿಸಿರುತ್ತವೆ. ನಿಮ್ಮ ಖಾತೆಗಳಲ್ಲಿನ ವ್ಯವಹಾರ ಹಾಗೂ ಶಿಸ್ತು ಪರಿಶೀಲಿಸಿದ ಬಳಿಕ ನಿಮಗೆ ಪೂರ್ವ ಅನುಮೋದಿತ ಲೋನ್ ಆಫರ್ ಸಂದೇಶವನ್ನು ಕಳುಹಿಸಲಾಗುತ್ತದೆ. ನಿಮ್ಮ KYC, ಕ್ರೆಡಿಟ್ ಸ್ಕೋರ್, ಸಾಲ ಮರುಪಾವತಿ ದಾಖಲೆ, ಆದಾಯದ ಮೂಲಗಳಂತಹ ಮಾಹಿತಿಯನ್ನು ಶೋಧಿಸಿದ ನಂತರವೇ ಈ ಸಾಲದ ಕೊಡುಗೆ ನೀಡಲಾಗುತ್ತದೆ. ಕನಿಷ್ಠ ದಾಖಲಾತಿಗಳೊಂದಿಗೆ ಈ ಸಾಲವನ್ನು ತ್ವರಿತವಾಗಿ ನೀಡಲಾಗುತ್ತದೆ.

ಪೂರ್ವ-ಅನುಮೋದಿತ ಸಾಲದ ಪ್ರಯೋಜನಗಳು ಇವು!

  • ಕಡಿಮೆ ಬಡ್ಡಿ ದರ: ಪೂರ್ವ-ಅನುಮೋದಿತ ಸಾಲದ ಕೊಡುಗೆ ಅನೇಕ ಪ್ರಯೋಜನಗಳೊಂದಿಗೆ ನಿಮಗೆ ಲಭ್ಯವಾಗುತ್ತವೆ. ಈ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತದೆ. ಏಕೆಂದರೆ ಈ ಕೊಡುಗೆ ನೀಡಲು ಬ್ಯಾಂಕ್ ಆಯ್ಕೆ ಮಾಡಿದ ಎಲ್ಲ ಜನರು ಉತ್ತಮ ಆರ್ಥಿಕ ದಾಖಲೆ ಹೊಂದಿರುತ್ತಾರೆ. ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಲಾಗಿರುತ್ತದೆ. ಇಲ್ಲದಿದ್ದರೆ ಅತ್ಯಲ್ಪ ಮಾತ್ರವೇ ಹಾಕಲಾಗುತ್ತದೆ.
  • ಯಾವುದೇ ದಾಖಲೆ ನೀಡುವ ಅಗತ್ಯವಿಲ್ಲ: ಯಾವುದೇ ದಾಖಲೆಗಳಿಲ್ಲದೇ ಅನೇಕ ಬ್ಯಾಂಕುಗಳು ಪೂರ್ವ- ಅನುಮೋದಿತ ಸಾಲವನ್ನು ನೀಡುತ್ತವೆ. ಏಕೆಂದರೆ ಆಫರ್ ಪಡೆಯುವವರ KYC ದಾಖಲೆ ಈಗಾಗಲೇ ಬ್ಯಾಂಕ್‌ನಲ್ಲಿ ಲಭ್ಯವಿರುತ್ತದೆ. ಒಬ್ಬ ವ್ಯಕ್ತಿ ಈಗಾಗಲೇ ಆ ಬ್ಯಾಂಕಿನಿಂದ ಸಾಲ ಪಡೆದಿದ್ದರೆ, ಅವನ ಆದಾಯದ ವಿವರಗಳು ಸಹ ಬ್ಯಾಂಕ್‌ನಲ್ಲಿ ಇರುತ್ತವೆ. ಆದ್ದರಿಂದ ದಾಖಲೆಗಳ ಅಗತ್ಯವಿಲ್ಲ.
  • ತ್ವರಿತ ಮಂಜೂರಾತಿ: ಪೂರ್ವ ಅನುಮೋದಿತ ಸಾಲವನ್ನು ತಕ್ಷಣವೇ ಮಂಜೂರು ಮಾಡಲಾಗುತ್ತದೆ. ಈ ಕ್ರಮದಲ್ಲಿ, ಸಾಲಗಾರನು ಸಾಲದ ಅವಧಿ ಮತ್ತು EMI ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಸಾಲಗಾರನು ಅನುಮೋದನೆ ಪಡೆದ ತಕ್ಷಣ, ಹಣವನ್ನು ಅವನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಪೂರ್ವ ಅನುಮೋದಿತ ಸಾಲವನ್ನು ಪಡೆಯುವುದು ಹೇಗೆ?

  • ಪೂರ್ವ ಅನುಮೋದಿತ ಸಾಲದ ಪ್ರಸ್ತಾಪ ಮಾಡುವುದು ಬ್ಯಾಂಕ್ ಅಥವಾ NBFC ಗೆ ಬಿಟ್ಟದ್ದು.
  • ಬ್ಯಾಂಕ್ ಗಮನಕ್ಕೆ ಬರಲು ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಿಕೊಳ್ಳಿ. 700 ರಿಂದ 750 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಅಸ್ತಿತ್ವದಲ್ಲಿರುವ ಸಾಲದ EMI ಗಳು, ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ.
  • ಹೆಚ್ಚಿನ ಸಾಲ, ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬೇಡಿ.
  • ನಿಮ್ಮ ಆದಾಯದ ಸಾಲ ಮರುಪಾವತಿಯ ಪಾಲು ಶೇಕಡಾ 36ರ ಒಳಗೆ ಇದೆ ಎಂದು ಖಚಿತಪಡಿಸಿಕೊಳ್ಳಿ.
  • ನೀವು ಈ ಅಂಶಗಳನ್ನು ಅನುಸರಿಸಿದರೆ ಮತ್ತು ಆರ್ಥಿಕ ಶಿಸ್ತನ್ನು ಅಭ್ಯಾಸ ಮಾಡಿದರೆ, ಭವಿಷ್ಯದಲ್ಲಿ ನೀವು ಖಂಡಿತವಾಗಿಯೂ ಪೂರ್ವ ಅನುಮೋದಿತ ಸಾಲದ ಕೊಡುಗೆಗಳನ್ನು ಪಡೆಯುತ್ತೀರಿ.