Bengaluru Traffic: ಹೋಳಿ ಹಬ್ಬ ಜಾಲಿ ಜಾಲಿ…ಪ್ರಮುಖ ರಸ್ತೆಗಳು ಖಾಲಿ..ಖಾಲಿ..

Bengaluru Traffic: ಹೋಳಿ ಹಬ್ಬ ಜಾಲಿ ಜಾಲಿ…ಪ್ರಮುಖ ರಸ್ತೆಗಳು ಖಾಲಿ..ಖಾಲಿ..


Bengaluru Traffic: Benglauru Outer Ring Road taken holi day due to holi fest today, No vehicle on ORR. takes only 35 minutes for 20 km travel today, can we have holi day remaining 364 days, netizens reacts,

ಹೋಳಿ ಹಬ್ಬ ಇರುವುದರಿಂದ ಇಂದು ಮಾರ್ಚ್ 14ರಂದು ಬೆಂಗಳೂರು ಹೊರ ವರ್ತುಲ ರಸ್ತೆಗೆ ರಜೆಯಲ್ಲಿ ವಾಹನಗಳಿಲ್ಲದೇ ಖಾಲಿ ಖಾಲಿ. ಇಂದು ಬೆಂಗಳೂರು ಓಆರ್‌ಆರ್‌ ಟ್ರಾಫಿಕ್ ಮುಕ್ತಿ.
ಬೆಂಗಳೂರು, ಮಾರ್ಚ್‌ 14: ಭಾರೀ ಸಂಚಾರ ದಟ್ಟಣೆಯ ಕುಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿ, ಮಹಾನಗರ ಬೆಂಗಳೂರಲ್ಲಿ ಶುಕ್ರವಾರ ಮಹತ್ವದ ಸಂಗತಿಗೆ ಸಾಕ್ಷಿಯಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳು, ಅದರಲ್ಲೂ ಹೊರ ವರ್ತುಲ ರಸ್ತೆ ಖಾಲಿ ಖಾಲಿಯಾಗಿದ್ದು ಕಂಡು ಬಂತು. ಬೆಂಗಳೂರಿನಲ್ಲಿ ಇಂತಹ ಅಸಮಾನ್ಯ ದೃಶ್ಯ ಕಾಣುವುದು ತೀರಾ ವಿರಳ. ರಸ್ತೆ ಖಾಲಿ ಇರುವುದನ್ನು

ಬೆಂಗಳೂರಿನ ಹೊರ ವರ್ತುಲ ರಸ್ತೆ (ORR) ಹೋಳಿ ಹಬ್ಬದಂದು ಅಸಾಮಾನ್ಯ ದೃಶ್ಯಕ್ಕೆ ಸಾಕ್ಷಿಯಾಗಿದೆ. ಈ ಕುರಿತು ನಮ್ಮ ಬೆಂಗಳೂರು ಎಕ್ಸ್‌ ಖಾತೆಯಲ್ಲಿ ORR ರಸ್ತೆಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದಲ್ಲೆ ನಕ್ಷೆ ಮ್ಯಾಪ್‌ನಲ್ಲಿ ಎಲ್ಲೂ ಸಂಚಾರ ದಟ್ಟಣೆಯ ಕೆಂಪು ಗುರುತು ಇಲ್ಲದ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಹೋಳಿ ಹಬ್ಬದಂದು ಸುಗಮ ಸಂಚಾರ ಹರಿವು ಕಂಡು ಬಂದಿದೆ.

Holiday Taken Bengaluru Outer Ring Road due to Holi Today No Vehicle on ORR

ಬಣ್ಣದೋಕುಳಿಯಲ್ಲಿ ಮಿಂದು ಜನ ಜಾಲಿ, ರಸ್ತೆಗಳು ಖಾಲಿ.. ಹೋಳಿ ಹಬ್ಬದಂದು ಶುಕ್ರವಾರ ಅನೇಕ ಕಂಪನಿಗಳಿಗೆ ರಜೆ ನೀಡಲಾಗಿದೆ. ಕೆಲವೆಡೆ ಅಂಗಡಿ ಮುಂಗಟ್ಟುಗಳು, ಶಾಲೆ ಮತ್ತು ಕಾಲೇಜುಗಳು, ಬ್ಯಾಂಕ್‌ಗಳಿಗೆ ರಜೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜನರು ರಜೆಯ ಮೋಜು ಮಸ್ತಿಯಲ್ಲಿ ಜಾಲಿ ಮಾಡುತ್ತಿದ್ದಾರೆ. ಕೆಲವರಂತು ಸ್ನೇಹಿತರ ಜೊತೆಗೂಡು ಬಣ್ಣದೋಕುಳಿ ಆಡಿ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದಾಗಿ ಐಟಿ ಕೇಂದ್ರಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಮುಖ್ಯವಾಗಿ ಹೊರ ವರ್ತುಲ ರಸ್ತೆಗಳು ಖಾಲಿ ಹೊಡೆಯುತ್ತಿದ್ದವು. ಎಂದಿನಂತೆ ದಟ್ಟಣೆ, ವಾಹನಗಳ ಸಂಚಾರ ಇರಲಿಲ್ಲಿಲ್ಲ.

ನಿತ್ಯ ಜನಜಂಗುಳಿ, ಸಿಗ್ನಲ್, ಟ್ರಾಫಿಕ್, ವಾಹನಗಳು ಹೆಚ್ಚಿರುವ ORR ರಸ್ತೆ ಇಂದು ಶುಕ್ರವಾರ ಪೀಕ್ ಸಮಯದಲ್ಲೇ ಖಾಲಿ ಖಾಲಿ ಇದ್ದದ್ದು ಕಂಡು ಬಂತು. ಒಂದೇ ದಿನದಲ್ಲಿ ಇಷ್ಟೊಂದು ವ್ಯತ್ಯಾಸ, ಸುಗಮ ಸಂಚಾರಕ್ಕೆ ಬೆಂಗಳೂರು ಸಾಕ್ಷಿಯಾಗಿದೆ. ‘ಹೋಳಿ ಪ್ರಯುಕ್ತ ಬೆಂಗಳೂರು ಓಆರ್‌ಆರ್ ರಸ್ತೆ ನೋಡಿ’ ಎಂದು ಪೋಸ್ಟ್‌ನೊಂದಿಗೆ ಬರೆಯಲಾಗಿದೆ.