Last Updated:
ಸೌಮ್ಯಾ ದೇವಾಡಿಗ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಫ್ಲೋರ್ ಬಾಲ್ ತರಬೇತುದಾರೆಯಾಗಿ ಆಯ್ಕೆಯಾಗಿದ್ದಾರೆ. ಇಟಲಿಯಲ್ಲಿ ಮಾರ್ಚ್ 8-15ರವರೆಗೆ ಈ ಕ್ರೀಡಾಕೂಟ ನಡೆಯಲಿದೆ.
ಈ ಬಾರಿಯ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ವಿಂಟರ್ ಗೇಮ್ಸ್ ಟೂರ್ನ್ 2025(Special Olympics World Winter Games Tournament 2025) ಇಟಲಿಯಲ್ಲಿ(Italy) ನಡೆಯುತ್ತಿದೆ. ಈ ಟೂರ್ನಿಯಲ್ಲಿ ಭಾಗವಹಿಸಲು ಮಂಗಳೂರಿನ ಸೌಮ್ಯಾ ದೇವಾಡಿಗ ಫ್ಲೋರ್ ಬಾಲ್ ತರಬೇತುದಾರೆಯಾಗಿ ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇವರು ಕರ್ನಾಟಕದಿಂದ(Karnataka) ಆಯ್ಕೆಯಾದ ಏಕೈಕ ತರಬೇತುದಾರೆ ಎಂಬುದು ಹೆಮ್ಮೆಯ ವಿಚಾರ.
ಹೌದು… ಲಯನ್ಸ್ ವಿಶೇಷ ಶಾಲೆಯ ಶಿಕ್ಷಕಿ ಸೌಮ್ಯಾ ದೇವಾಡಿಗ. ಇವರು ಕಬ್ಬಡ್ಡಿ ಆಟಗಾರ್ತಿ. ಲಯನ್ಸ್ ವಿಶೇಷ ಶಾಲೆಗೆ ಬಂದ ಬಳಿಕ ಅವರು ಫ್ಲೋರ್ ಬಾಲ್ ಅನ್ನು ಅಭ್ಯಾಸ ಮಾಡಿ ವಿಶೇಷ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಫ್ಲೋರ್ ಬಾಲ್ ವಿಶೇಷ ಮಕ್ಕಳಿಗಾಗಿ ಇರುವ ಆಟ. ನೋಡಲು ಹಾಕಿ ತರಹ ಇರುತ್ತದೆ. ಆದರೆ ಇದರ ಸ್ಟಿಕ್‌ನಲ್ಲಿ ಬಾಲ್ ಹೊಡೆಯುವಲ್ಲಿ ಪ್ಲಾಸ್ಟಿಕ್ ಅಳವಡಿಸಲಾಗುತ್ತದೆ.
ಇದನ್ನೂ ಓದಿ: Nandini River: ಮಂಗಳೂರಿನ ನಂದಿನಿ ನದಿ ಉಳಿವಿಗೆ ಸ್ಥಳೀಯರ ಹೋರಾಟ!
ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ವಿಂಟರ್ ಗೇಮ್ಸ್ ಟೂರ್ನ್ 2025ಕ್ಕೆ ಆಯ್ಕೆಯ ಪರೀಕ್ಷೆ ನಾಲ್ಕೈದು ಹಂತದ ಪರೀಕ್ಷೆ ನಡೆದ ಬಳಿಕ, ಸೌಮ್ಯಾ ದೇವಾಡಿಗ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಫ್ಲೋರ್ ಬಾಲ್ ತರಬೇತುದಾರೆಯಾಗಿ ಆಯ್ಕೆಯಾಗಿದ್ದಾರೆ. ಇಟಲಿಯಲ್ಲಿ ಮಾರ್ಚ್ 8-15ರವರೆಗೆ ಈ ಕ್ರೀಡಾಕೂಟ ನಡೆಯಲಿದೆ.
ಇದರಲ್ಲಿ 102 ದೇಶಗಳ 1,500 ಕ್ರೀಡಾಪಟುಗಳು, 1000 ತರಬೇತುದಾರರು ಭಾಗವಹಿಸಲಿದ್ದಾರೆ. ಅವರಲ್ಲಿ ಓರ್ವ ತರಬೇತುದಾರೆ ಸೌಮ್ಯಾ ದೇವಾಡಿಗ. ಒಟ್ಟಿನಲ್ಲಿ ಭಾರತದ ತಂಡ ಸ್ಪೆಷಲ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ತರಲಿ ಎಂಬುದೇ ನಮ್ಮ ಆಶಯ.
Dakshina Kannada,Karnataka
March 06, 2025 5:04 PM IST