60ರ ಹರೆಯದಲ್ಲಿ ಅಮೀರ್ ಖಾನ್ ಡೇಟಿಂಗ್; ಹೊಸ ಪಾರ್ಟನರ್
ಪರಿಚಯಿಸಿದ ಬಾಲಿವುಡ್ ನಟ – AAMIR KHAN INTRODUCES NEW PARTNER
ಎರಡು ಮದುವೆಯ ವಿಚ್ಛೇದನದ ಬಳಿಕ ನಟ ಅಮೀರ್ ಖಾನ್ ಇದೀಗ ಮೂರನೇ ಡೇಟಿಂಗ್ ನಡೆಸುತ್ತಿದ್ದು,
ಈ ಕುರಿತು ಮುಕ್ತವಾಗಿ ತಿಳಿಸಿದ್ದಾರೆ.
ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ 60ನೇ ವಸಂತಕ್ಕೆ ಕಾಲಿಟ್ಟಿದ್ದು, ಇದೇ ಸಂಭ್ರಮದಲ್ಲಿ ತಮ್ಮ ಹೊಸ ಸಂಗಾತಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಈಗಾಗಲೇ ಎರಡು ಮದುವೆಯಿಂದ ವಿಚ್ಛೇದನ ಪಡೆದಿರುವ ನಟ ಬೆಂಗಳೂರಿನ ಯುವತಿ ಜೊತೆ ತಾವು ಪ್ರೀತಿಯಲ್ಲಿರುವುದಾಗಿ ಅಧಿಕೃತವಾಗಿ ಹೇಳಿದ್ದಾರೆ.
ಮುಂಬೈನಲ್ಲಿ ತಮ್ಮ ಹುಟ್ಟುಹಬ್ಬದ ಮುನ್ನಾದಿನ ನಡೆದ ಸಂಭ್ರಮಾಚರಣೆಯಲ್ಲಿ ಮಾಧ್ಯಮಗಳೆದುರು ಮಾತನಾಡಿರುವ ಅವರು,
ಗೌರಿ ಸ್ಟ್ರಾಟ್ ಜೊತೆ ತಾವು ಡೇಟಿಂಗ್ ನಡೆಸುತ್ತಿರುವುದಾಗಿ ತಿಳಿಸಿದರು.
ಈ ಹಿಂದೆ ಅಮೀರ್ ಖಾನ್, ರೀನಾ ದತ್ ಮತ್ತು ಕಿರಣ್ ರಾವ್ ಅವರನ್ನು ಮದುವೆಯಾಗಿದ್ದರು. ಮೊದಲ ಪತ್ನಿಯಿಂದ ಜುನೈದ್ ಮತ್ತು ಇರಾ ಎಂಬ ಮಕ್ಕಳನ್ನು ಪಡೆದಿದ್ದಾರೆ.
2005ರಲ್ಲಿ ಕಿರಣ್ರಾವ್ ಅವರನ್ನು ಮದುವೆಯಾಗಿದ್ದು, 2021ರಲ್ಲಿ ದೂರವಾದರು. ಇಬ್ಬರೂ ಒಟ್ಟಾಗಿ ಮಗ ಅಜಾದ್ನ ಪೋಷಕತ್ವ ನಿಭಾಯಿಸುತ್ತಿದ್ದಾರೆ.
ತಮ್ಮ ಹೊಸ ಸಂಗಾತಿಯ ಕುರಿತು ಮಾತ್ರವಲ್ಲದೇ, ತಮ್ಮ ಮುಂದಿನ ಸಿನಿಮಾಗಳ ಕುರಿತೂ ಮಾತನಾಡಿದ ಅಮೀರ್, ‘ಮಹಾಭಾರತ’ವನ್ನು ಸಿನಿಮಾವಾಗಿ
ಮಾಡುವ ಉತ್ಸುಕತೆ ಕುರಿತು ತಿಳಿಸಿದರು. ಇದೀಗ ಚಿತ್ರಕ್ಕೆ ಬರವಣಿಗೆ ಆರಂಭಿಸಿದ್ದು, ತಂಡದಲ್ಲಿ ಎಲ್ಲರನ್ನೂ ಕೂಡಿಸಿದ್ದು, ಹೇಗೆ ಸಾಗಲಿದೆ ಎಂಬುದನ್ನು ನೋಡಬೇಕಿದೆ ಎಂದರು.
ಹೋಳಿ ಸಂಭ್ರಮದ ದಿನದಂದೇ ಅಂದರೆ, ಮಾರ್ಚ್ 14ರಂದು ಅಮೀರ್ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಅಮೀರ್ ಅವರ ‘ಸಿತಾರೇ ಜಾಮೀನ್ ಪರ್’
ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ನಟಿ ಜೆನಿಲಿಯಾ ಪ್ರಮುಖ ಪಾತ್ರದಲ್ಲಿದ್ದಾರೆ.