REET ಪರೀಕ್ಷೆ ವೇಳೆ ಕಾಣಿಸಿಕೊಂಡ ಹೆರಿಗೆ ನೋವು; ಹೆಣ್ಣು ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ – REET EXAM PREGNANT WOMAN DELIVARY

 

REET ಪರೀಕ್ಷೆ ವೇಳೆ ಕಾಣಿಸಿಕೊಂಡ ಹೆರಿಗೆ ನೋವು; ಹೆಣ್ಣು ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ – REET EXAM PREGNANT WOMAN DELIVARY

ರಾಜಸ್ಥಾನದ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಹಾಜರಾದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು, ಮಗುವಿಗೆ ಜನ್ಮ ನೀಡಿದ್ದಾರೆ.

ಟೊಂಕ್​, ರಾಜಸ್ಥಾನ​: ರಾಜಸ್ಥಾನದ ಶಿಕ್ಷಕರ ಅರ್ಹತಾ ಪರೀಕ್ಷೆ (ಆರ್​ಇಇಟಿ)-2024 ಪರೀಕ್ಷೆ ವೇಳೆ ಅಭ್ಯರ್ಥಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿದೆ. ಶಿಕ್ಷಕರ ಅರ್ಹತೆ ಪರೀಕ್ಷೆಗೆ ಬಂದಿದ್ದ ತುಂಬು ಗರ್ಭಿಣಿಗೆ ಪರೀಕ್ಷಾ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಟೊಂಕ್​ ಜಿಲ್ಲೆಯ ಮಲ್ಪುರದ ಬಗ್ದಿ ಗ್ರಾಮದ ಪ್ರಿಯಾಂಕಾ ಚೌಧರಿ ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ. ಫೆ. 27 ರಂದು ಸರ್ಕಾರಿ ಶಾಲೆಯಲ್ಲಿ ಪರೀಕ್ಷೆ ಬರೆಯಲು ಇವರು ಆಗಮಿಸಿದ್ದರು. ಪರೀಕ್ಷೆಗೆ ಇನ್ನೇನು ಕೆಲವೇ ನಿಮಿಷ ಇದೆ ಎನ್ನುವಾಗ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣಕ್ಕೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಆಕೆಯ ನೋವು ಗಮನಿಸಿದ ಪರೀಕ್ಷಾ ಕೇಂದ್ರದ ಸೂಪರಿಟೆಂಡೆಂಟ್​ ಜಿಲ್ಲಾ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣಕ್ಕೆ ಆಕೆಯನ್ನು ಸಾದತ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಹಜ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರಿಯಾಂಕ ಗಂಡ ಜೀತ್ರಾಮ್​ ಚೌಧರಿ, ನಾವು ಪರೀಕ್ಷೆಗೆ ಬಂದಿದ್ದು, ಹೆರಿಗೆ ನೋವು ಕಾಣಿಸಿಕೊಳ್ಳಬಹುದು ಎಂಬುದು ಯಾವುದೇ ಐಡಿಯಾ ಇರಲಿಲ್ಲ. ಪರೀಕ್ಷೆ ಸಮಯದಲ್ಲಿ ನಮ್ಮ ಮನೆಗೆ ಲಕ್ಷ್ಮಿ ಬಂದಿರುವುದು ಅದೃಷ್ಟದ ಸಂಗತಿಯಾಗಿದೆ. ಹೆರಿಗೆ ನೋವಿನಿಂದಾಗಿ ಪರೀಕ್ಷೆಯನ್ನು ಸಂಪೂರ್ಣವಾಗಿ ಬರೆಯಲಾಗಲಿಲ್ಲ ಎಂಬ ಕೊರಗು ಪ್ರಿಯಾಂಕಾಗೆ ಇದೆ ಎಂದರು.

ಆಸ್ಪತ್ರೆ ಆಡಳಿತದ ಪ್ರಕಾರ, ತಾಯಿ ಮತ್ತು ಮಕ್ಕಳು ಇಬ್ಬರು ಆರೋಗ್ಯವಾಗಿದ್ದಾರೆ. ರಾಜ್ಯದಲ್ಲಿ ಫೆ. 27 ಮತ್ತು 28ರಂದು ನಡೆದ ಆರ್​ಇಇಟಿ 2025 ಪರೀಕ್ಷೆಗೆ 14 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದಾರೆ. ರಾಜ್ಯದ 1,731 ಕೇಂದ್ರದಲ್ಲಿ ಈ ಪರೀಕ್ಷೆ ನಡೆಯುತ್ತಿದೆ.