Scam Alert: ನಿಮ್ಮ ಖಾತೆಯ ಹಣ ದೋಚಬಹುದು ಈ ʻಕಾಲ್ ಮರ್ಜಿಂಗ್‌ ಸ್ಕ್ಯಾಮ್‌ʼ! ಹುಷಾರಾಗಿರಲು ಈ ಕ್ರಮಗಳನ್ನು ಫಾಲೋ ಮಾಡಿ

Scam Alert: ನಿಮ್ಮ ಖಾತೆಯ ಹಣ ದೋಚಬಹುದು ಈ ʻಕಾಲ್ ಮರ್ಜಿಂಗ್‌ ಸ್ಕ್ಯಾಮ್‌ʼ! ಹುಷಾರಾಗಿರಲು ಈ ಕ್ರಮಗಳನ್ನು ಫಾಲೋ ಮಾಡಿ


ಭಾರತದಲ್ಲಿ ʻಕಾಲ್ ಮರ್ಜಿಂಗ್‌ ಸ್ಕ್ಯಾಮ್ʼ ಹೆಚ್ಚಾಗುತ್ತಿದ್ದು, NPCI ಮತ್ತು ಸೈಬರ್‌ ಪೊಲೀಸರು ಜನರನ್ನು ಅಪರಿಚಿತ ಸಂಖ್ಯೆಯಿಂದ ಬರುವ ಕರೆಗಳನ್ನು ಮರ್ಜ್ ಮಾಡದಂತೆ ಎಚ್ಚರಿಸಿದ್ದಾರೆ.

ಡಿಜಿಟಲ್‌ ಸ್ಕ್ಯಾಮ್‌ಗೆ (Digital Scam) ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ಈ ಸ್ಕ್ಯಾಮರ್‌ಗಳು (Scammer) ಜನರಿಂದ ಹಣ (Money) ಪೀಕಲು ಪ್ರಯತ್ನಿಸುತ್ತಲೇ ಇರುತ್ತಾರೆ.

ಭಾರತದಲ್ಲಿ ಹೆಚ್ಚಾಗ್ತಿದೆ ʻಕಾಲ್ ಮರ್ಜಿಂಗ್‌ ಸ್ಕ್ಯಾಮ್‌ʼ!

ಇತ್ತೀಚೆಗೆ ʻಕಾಲ್ ಮರ್ಜಿಂಗ್‌ ಸ್ಕ್ಯಾಮ್‌ʼಗೆ ಸಂಬಂಧಿಸದಂತೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರನ್ನು ಅಲರ್ಟ್‌ ಆಗಿರುವಂತೆ ಸೈಬರ್‌ ಪೊಲೀಸರು ಎಚ್ಚರಿಸುತ್ತಿದ್ದಾರೆ. ʻಕಾಲ್ ಮರ್ಜಿಂಗ್‌ ಸ್ಕ್ಯಾಮ್‌ʼ ಅನ್ನೋದು ಯಾರೋ ಒಬ್ಬ ವ್ಯಕ್ತಿ ಕಾಲ್ ಮಾಡಿ ನಿಮ್ಮ ಬ್ಯಾಂಕಿನ ಒಟಿಪಿ ಪಡೆಯುವ ಕೃತ್ಯವಾಗಿದೆ. ಈ ಹೊಸ ಹಗರಣವು ಬಳಕೆದಾರರನ್ನು ಉದ್ದೇಶಪೂರ್ವಕವಾಗಿ ತಮ್ಮ ಒನ್-ಟೈಮ್ ಪಾಸ್‌ವರ್ಡ್ ಅನ್ನು (OTP) ಬಹಿರಂಗಪಡಿಸುವಂತೆ ಮೋಸಗೊಳಿಸಲು ಬಳಸುತ್ತದೆ.

Leave a Reply

Your email address will not be published. Required fields are marked *