ಇದೀಗ ಐಫೋನ್ 16 ಪ್ರೋ ಮೇಲೆ ಬಂಪರ್ ಆಫರ್ ಘೋಷಿಸಿದ್ದು, ಈ ಮೂಲಕ ಆ್ಯಪಲ್ ಕಂಪನಿಯ ಸಾಧನಗಳನ್ನು ಖರೀದಿಸಬೇಕೆಂದುಕೊಂಡವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ಇದನ್ನೂ ಓದಿ:
ಪೋಷಕರೇ ಚಿಂತೆ ಬಿಡಿ, ಮಕ್ಕಳು ಇನ್ಸ್ಟಾಗ್ರಾಂನಲ್ಲಿ ಏನ್ ನೋಡ್ತಾರೆ ಅನ್ನೋದನ್ನು ಇನ್ಮುಂದೆ ನೀವೇ ತಿಳ್ಕೋಬಹುದು!
ಐಪೋನ್ 16 ಪ್ರೋ ಮೇಲೆ ಬಂಪರ್ ರಿಯಾಯಿತಿ
ಬಿಳಿ ಟೈಟಾನಿಯಂ ಬಣ್ಣದಲ್ಲಿರುವ ಐಫೋನ್ 16 ಪ್ರೋ 128 ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ ಅಮೆಜಾನ್ನಲ್ಲಿ 1,19,900 ರೂ. ಆದರೆ, ನೀವು ಯಾವುದೇ ಬ್ಯಾಂಕ್ ರಿಯಾಯಿತಿ ಇಲ್ಲದೆ 8% ರಿಯಾಯಿತಿಯನ್ನು ಈ ಫೋನ್ ಮೇಲೆ ಪಡೆಯಬಹುದು. ಇನ್ನು ಈ ರಿಯಾಯಿತಿಯ ನಂತರ, ಅದರ ಬೆಲೆ 1,10,900 ರೂಪಾಯಿ ಪಡೆಯಬಹುದು. ಇನ್ನು ಈ ರಿಯಾಯಿತಿ ಅಷ್ಟೇ ಅಲ್ಲದ, ಇದರ ಜೊತೆಗೆ ಎಕ್ಸ್ಚೇಂಜ್ ಆಫರ್ಗಳು ಮತ್ತು ಬ್ಯಾಂಕ್ ರಿಯಾಯಿತಿಗಳನ್ನು ಪಡೆಯುವ ಮೂಲಕ ನೀವು ಅದನ್ನು ಇನ್ನೂ ಅಗ್ಗವಾಗಿ ಖರೀದಿಸಬಹುದು.
ಎಕ್ಸ್ಚೇಂಜ್ ಆಫರ್ಸ್ ಮತ್ತು ಬ್ಯಾಂಕ್ ರಿಯಾಯಿತಿಗಳು
ನಿಮ್ಮ ಹಳೆಯ ಹ್ಯಾಂಡ್ಸೆಟ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕವೂ ನೀವು ಈ ಸ್ಮಾರ್ಟ್ಫೋನ್ ಅನ್ನು ಖರೀದಿಸಬಹುದು. ಇದರ ಮೇಲೆ 22,800 ರೂ.ಗಳ ವಿನಿಮಯ ಕೊಡುಗೆ ಲಭ್ಯವಿದೆ. ನಿಮ್ಮ ಫೋನ್ ಮಾಹಿತಿಯನ್ನು ಒದಗಿಸುವ ಮೂಲಕ ನೀವು ಎಕ್ಸ್ಚೇಂಜ್ ಆಫರ್ ಅನ್ನು ನೋಡಬಹುದು.
ಐಫೋನ್
ವಿನಿಮಯ ಮೌಲ್ಯವು ಫೋನ್ನ ಸ್ಥಿತಿ ಮತ್ತು ಮಾದರಿಯನ್ನು ಅವಲಂಬಿಸಿರುತ್ತದೆ. SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ಮೂಲಕ ಪಾವತಿಸುವ ಗ್ರಾಹಕರಿಗೆ 3,000 ರೂ.ಗಳ ತಕ್ಷಣದ ರಿಯಾಯಿತಿ ಸಿಗುತ್ತದೆ. ಐಸಿಐಸಿಐ ಮತ್ತು ಕೋಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ಮೂಲಕ ಪಾವತಿಸುವ ಗ್ರಾಹಕರು ಸಹ ಇದೇ ರೀತಿಯ ರಿಯಾಯಿತಿಯನ್ನು ಪಡೆಯುತ್ತಾರೆ.
ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ನ ಫೀಚರ್ಸ್: ಈ ಎರಡೂ ಸ್ಮಾರ್ಟ್ಫೋನ್ಗಳು ಕೂಡ ಕ್ರಮವಾಗಿ 6.3 ಇಂಚಿನ ಮತ್ತು 6.9 ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ ಹೊಂದಿವೆ. ಇದು 120Hz ರಿಫ್ರೆಶ್ ರೇಟ್, 2,000 ನಿಟ್ಸ್ ವರೆಗೆ ಗರಿಷ್ಠ ಬ್ರೈಟ್ನೆಸ್ ಮತ್ತು ಆಪಲ್ನ ಅಪ್ಗ್ರೇಡ್ ಮಾಡಿದ ಸೆರಾಮಿಕ್ ಶೀಲ್ಡ್ ರಕ್ಷಣೆಯನ್ನು ಹೊಂದಿದೆ.
ಈ ಎರಡೂ ಮೊಬೈಲ್ಗಳು ಕೂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿವೆ. ಜೊತೆಗ 48MP ಪ್ರಾಥಮಿಕ ಕ್ಯಾಮೆರಾ, 12MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ, 12 MP ಟೆಲಿಫೋಟೋ ಕ್ಯಾಮರಾ ಮತ್ತು 5x ಆಪ್ಟಿಕಲ್ ಜೂಮ್ ಕಾರ್ಯಕ್ಷಮತೆಯನ್ನು ನೀಡುವ ‘ಟೆಟ್ರಾಪ್ರಿಸಂ’ ಪೆರಿಸ್ಕೋಪ್ ಲೆನ್ಸ್, 12MP TrueDepth ಕ್ಯಾಮೆರಾ ಇದೆ. ಸೆಲ್ಫಿಗಾಗಿ, 4K 120fps ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತವೆ.
ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೋನ್ಗಳು iOS 18 ಔಟ್-ಆಫ್-ದಿ-ಬಾಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತವೆ. ಮತ್ತು ಆಪಲ್ನ ಸೆಕೆಂಡ್ಜನರೇಷನ್ನ 3nm A18 Pro ಚಿಪ್ಸೆಟ್ ಹೊಂದಿವೆ. ಕಳೆದ ವರ್ಷದ ಮಾದರಿಗಳಿಗೆ ಹೋಲಿಸಿದರೆ ಕಾರ್ಯಕ್ಷಮತೆಯಲ್ಲಿ XX ಹೆಚ್ಚಳವನ್ನು ನೀಡುವುದಾಗಿ ಕಂಪನಿ ಹೇಳಿದೆ. ಎರಡೂ ಫೋನ್ಗಳು ಕೂಡ ಎಲ್ಲಾ ರೀತಿಯಾದ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳಿಗೆ ಬೆಂಬಲವನ್ನು ನೀಡುತ್ತವೆ.
First Published :
March 13, 2025 9:31 PM IST