ಗುಲ್ಮಾರ್ಗ್​​ನಲ್ಲಿ ಸುರಿಯುತ್ತಿರುವ ಹಿಮ ; ಪ್ರವಾಸಿಗರು, ಸ್ಥಳೀಯರಲ್ಲಿ ಸಂತಸ – SNOWFALL IN GULMARG OF BARAMULLA

 

ಗುಲ್ಮಾರ್ಗ್​​ನಲ್ಲಿ ಸುರಿಯುತ್ತಿರುವ ಹಿಮ ; ಪ್ರವಾಸಿಗರು, ಸ್ಥಳೀಯರಲ್ಲಿ ಸಂತಸ – SNOWFALL IN GULMARG OF BARAMULLA

ಣಿವೆ ರಾಜ್ಯದ ಗಿರಿ ಶಿಖರಗಳಲ್ಲಿ ಹಿಮ ಸುರಿಯುತ್ತಿರುವುದು ಸಂತಸ ಮೂಡಿಸಿದೆ. ಗುಲ್ಮಾರ್ಗ್​ನಲ್ಲಿ ಇದೀಗ ಎಲ್ಲೆಡೆ ಹಿಮದ ರಾಶಿಗಳ ದೃಶ್ಯ ಮನಮೋಹಕವಾಗಿದೆ.

coutesy : etv bharat kannada
coutesy : etv bharat kannada

ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್​ನಲ್ಲಿ ನಿರಂತವಾಗಿ ಹಿಮ ಬೀಳುತ್ತಿದ್ದು, ಇದು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಹರ್ಷ ಮೂಡಿಸಿದೆ.

ಗುಲ್ಮಾರ್ಗ್​​ ಸೇರಿದಂತೆ ಕಣಿವೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕೆಲವು ತಿಂಗಳ ಹಿಂದೆ ಹಿಮ ಕಾಣದೆ ಬರ ಕಾಣಿಸಿಕೊಂಡಿತ್ತು. ಗುಲ್ಮಾರ್ಗ್​​ನಲ್ಲಿ ಈ ಬಾರಿ ಕಡಿಮೆ ಹಿಮ ಆಗಿತ್ತು. ಆದರೆ, ಇದೀಗ ಉತ್ತಮ ಹಿಮ ಬೀಳುತ್ತಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದ್ದು, ಅದನ್ನು ಸಂಭ್ರಮಿಸುತ್ತಿದ್ದಾರೆ.

coutesy : etv bharat kannada

ಈ ನಡುವೆ ಖೇಲೋ ಇಂಡಿಯಾಗಾಗಿ ಸರ್ಕಾರ ಮತ್ತು ಜಿಲ್ಲಾ ಆಡಳಿತ ಕೂಡ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಈ ರಾಜ್ಯದಲ್ಲಿ ನಡೆಸುತ್ತಿದ್ದು, ಗುಲ್ಮಾರ್ಗ್​​ ಅತಿಥ್ಯ ವಹಿಸಿರುವ ಹಿನ್ನೆಲೆ ವಿವಿಧ ರಾಜ್ಯದ ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಇಲ್ಲಿನ ಸುಂದರ ತಾಣಗಳ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕೂಡ ವ್ಯವಸ್ಥೆ ನಡೆಸಲಾಗಿದೆ. ಘನೀಕರಿಸಿರುವ ಹಿಮದ ರಾಶಿಯನ್ನು ನೋಡಲು ಕೂಡ ಕ್ರೀಡಾಪಟುಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಗುಲ್ಮಾರ್ಗ್​​ನ ಬಯಲು ಪ್ರದೇಶದಲ್ಲಿ ಕೂಡ ಹಿಮ ಸುರಿಯುತ್ತಿದ್ದು, ಶಿಖರದ ಪ್ರದೇಶದಲ್ಲಿ ಇದೀಗ ಹಿಮ ಹೆಚ್ಚಾಗಿರುವುದು, ಸ್ಕ್ರೀಯರ್​​ ಮತ್ತು ಸ್ನೋಬೋರ್ಡರ್​​ಗಳಿಗೆ ಖುಷಿ ತರಿಸಿದೆ.

ಜಮ್ಮು ಮತ್ತು ಕಾಶ್ಮೀರದ ಬಹುತೇಕ ಭಾಗದಲ್ಲಿ ಹಗುರದಿಂದ ಸಾಧಾರಣ ಹಿಮ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇಂದ್ರ ಮತ್ತು ಉತ್ತರ ಕಾಶ್ಮೀರದ ಮೇಲ್ಭಾಗ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ಪ್ರದೇಶದೆಲ್ಲೆಡೆ ಹಗುರದಿಂದ ಸಾಧಾರಣದವರೆಗೆ ಹಿಮವಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ದಕಿತ್​ ತಿಳಿಸಿದ್ದಾರೆ.

ಮಾರ್ಚ್​ 4ರಿಂದ 9ರ ವರೆಗೆ ಒಣ ಹವಾಮಾನ ಮುಂದುವರೆಯಲಿದೆ. ಆದರೆ, ಮಾರ್ಚ್​ 10 ರಿಂದ 12ರ ವರೆಗೆ ಮಳೆ ಮತ್ತು ಹಿಮ ಬೀಳಲಿದ್ದು, ಸೂಕ್ಷ್ಮ ಪ್ರದೇಶದಲ್ಲಿ ಭೂ ಕುಸಿತ, ಬೆಟ್ಟ ಕುಸಿತ, ಮಣ್ಣು ಕುಸಿತವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.