
ಹೋಳಿ ವಿಶೇಷ ; ಸ್ತ್ರೀಯರಂತೆ ವೇಷ ಧರಿಸಿ ಪೂಜೆ ಸಲ್ಲಿಸುವ ಪುರುಷರು – ಬಯಸಿದ್ದು ಈಡೇರುವ ನಂಬಿಕೆ – HOLY CELEBRATION
ಕರ್ನೂಲು ಜಿಲ್ಲೆಯ ಸಂತೆಕೂಡ್ಲೂರು ಗ್ರಾಮದಲ್ಲಿ ಗಂಡಸರು ಹೆಣ್ಣಿನ ವೇಷ ಧರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಶಿಷ್ಟವಾಗಿ ಹೋಳಿ ಹಬ್ಬವನ್ನ ಆಚರಿಸುತ್ತಾ ಬಂದಿದ್ದಾರೆ. ಕರ್ನೂಲು (ಆಂಧ್ರ ಪ್ರದೇಶ): ಹೋಳಿ ಕಾಮ ದಹನ ಮತ್ತು ಬಣ್ಣದ ಹಬ್ಬ. ಆದರೆ, ಜಿಲ್ಲೆಯ ಆದೋನಿ ಮಂಡಲದ ಸಂತೆಕೂಡ್ಲೂರು ಗ್ರಾಮದಲ್ಲಿ ವಿಶಿಷ್ಟವಾದ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿ ಹೋಳಿ ಬಂದೊಡನೆ ಪುರುಷರು ಸ್ತ್ರೀಯರಂತೆ ವೇಷ ಧರಿಸುತ್ತಾರೆ. ಅಲ್ಲದೇ, ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ತಲೆಮಾರುಗಳಿಂದಲೂ ಈ ಸಂಪ್ರದಾಯವನ್ನ ಮುಂದುವರೆಸಿಕೊಂಡು ಬಂದಿದ್ದಾರೆ. ಹೋಳಿ…